ಹೆಬ್ರಿ : ಮಂಗಳೂರಿನ ಪ್ರಖ್ಯಾತ ಉದ್ಯಮಿ ಕೊಡುಗೈದಾನಿ ಮುದ್ರಾಡಿ ಬೆಳಗುಂಡಿಯ ಮಂಜುನಾಥ ಆಚಾರ್ಯ ಮಂಗಳೂರು ( 7೦ ) ಅವರು ಜುಲೈ 18ರ ಶುಕ್ರವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಅತ್ಯಂತ ಸೌಮ್ಯ ಸ್ವಭಾವದ ಮಂಜುನಾಥ ಆಚಾರ್ಯ ಅಪಾರ ಮಂದಿಯ ಪ್ರೀತಿಗೆ ಪಾತ್ರರಾಗಿದ್ದರು. ಮಕ್ಕಳಿಗೆ ಅತ್ಯುತ್ತಮ ಶಿಕ್ಷಣವನ್ನು ನೀಡಿರುವ ಮಂಜುನಾಥ ಆಚಾರ್ಯರ 2 ಗಂಡು ಮಕ್ಕಳು ಮತ್ತು ಪುತ್ರಿ ಆಸ್ಟ್ರೇಲಿಯಾದಲ್ಲಿ ಉದ್ಯೋಗದಲ್ಲಿದ್ದಾರೆ. ಒರ್ವ ಪುತ್ರ ಮಂಗಳೂರಿನಲ್ಲಿದ್ದು ತನ್ನ ತಂದೆಯ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ. ಇತ್ತೀಚೆಗೆ ಲೋಕಾರ್ಪಣೆಗೊಂಡ ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ತೀರ್ಥಮಂಟಪದ ಕೊಡುಗೆಯನ್ನು ನೀಡಿದ್ದಾರೆ. ಬಳಿಕವೂ ದೇವಸ್ಥಾನದ ಅಭಿವೃದ್ಧಿ ಸಹಕಾರವನ್ನು ನೀಡುತ್ತ ಬಂದಿದ್ದಾರೆ.
ಮೃತರಿಗೆ ಪತ್ನಿ,3 ಗಂಡು, 1 ಹೆಣ್ಣು ಮಕ್ಕಳಿದ್ದಾರೆ.
ಶ್ರೀ ಶಿವಸುಜ್ಞಾನ ತೀರ್ಥ ಮಹಾ ಸ್ವಾಮೀಜಿ ಸಂತಾಪ
ವಿಶ್ವಕರ್ಮ ಸಮಾಜದ ಗಣ್ಯವ್ಯಕ್ತಿ ಕೊಡುಗೈದಾನಿ ಸರಳ ಸಜ್ಜನಿಕೆಯ ಮುದ್ರಾಡಿ ಬೆಳಗುಂಡಿಯ ಮಂಜುನಾಥ ಆಚಾರ್ಯ ಮಂಗಳೂರು ಅವರ ನಿಧನಕ್ಕೆ ಮೈಸೂರಿನಲ್ಲಿ ಚಾತುರ್ಮಾಸ್ಯ ವೃತಾನುಷ್ಠಾನದಲ್ಲಿರುವ ಹಾಸನ ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಜಗದ್ಗುರು ಪೀಠ, ವಿಶ್ವಕರ್ಮ ಮಹಾಸಂಸ್ಥಾನ ಪೀಠ ಹಾಗೂ ಕಜ್ಕೆ ಶಾಖಾ ಮಠದ ಪೀಠಾಧಿಪತಿಗಳಾದ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಸಂತಾಪ ಸೂಚಿಸಿ ಅವರ ಕುಟುಂಬಕ್ಕೆ ದುಖ:ವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
ನಾಳೆ ಮುದ್ರಾಡಿಯಲ್ಲಿ ಅಂತ್ಯ ಸಂಸ್ಕಾರ
ಮುದ್ರಾಡಿ ಮಂಜುನಾಥ ಆಚಾರ್ಯ ಅವರ ಅಂತ್ಯಸಂಸ್ಕಾರವು ಮುದ್ರಾಡಿ ಬೆಳಗುಂಡಿಯ ಅವರ ನಿವಾಸದ ಪರಿಸರದಲ್ಲಿ ಜುಲೈ 19ರ ಶನಿವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮಂಜುನಾಥ ಆಚಾರ್ಯ ಅವರ ನಿಧನಕ್ಕೆ ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ, ವಿಶ್ವಕರ್ಮ ಸಮಾಜದ ನೂರಾರು ಗಣ್ಯರು, ಪ್ರಮುಖರು, ಮುದ್ರಾಡಿ ಗಣ್ಯರು ಪ್ರಮುಖರು ಸಂತಾಪ ಸೂಚಿಸಿದ್ದಾರೆ.