ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ವೋಟ್ ಚೋರ್ ಗದ್ದಿ-ಚೋಡ್ ಕಾರ್ಯಕ್ರಮವನ್ನು ಉರ್ವಾ ಮಾರ್ಕೆಟ್ ಬಳಿ ಸಾರ್ವಜನಿಕ ಸಭೆಯನ್ನು ನಡೆಸಲಾಯಿತು. ಮತ್ತು ಈ ಸಾರ್ವಜನಿಕ ಸಭೆಯಲ್ಲಿ ವೋಟ್ ಚೋರ್ ಗದ್ದಿ ಚೋಡ್ ಯಾರು ಮತಗಳ್ಳತನ ಮಾಡಿದ್ದಾರೆ ಅವರು ಹುದ್ದೆಯಿಂದ ತೊಲಗಿ ಪ್ರಜಾಪ್ರಭುತ್ವವನ್ನು ಉಳಿಸಿ ಎಂಬ ಘೋಷಣೆಯೋಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ನೂರಾರು ಜನ ಬಂದು ತಮ್ಮ ಸಹಿಯನ್ನು ಮಾಡುವ ಮೂಲಕ ಪ್ರತಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿಯವರ ಹೋರಾಟಕ್ಕೆ ಬೆಂಬಲವನ್ನು ಸೂಚಿಸಲಾಯ್ತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಐವನ್ ಡಿʼಸೋಜಾ ಇವರು, ಮತಗಳ್ಳತನ ಒಂದು ಅಘಾತಕಾರಿ ಬೆಳವಣಿಗೆ ಪ್ರತಿಯೊಬ್ಬರ ಮತವನ್ನು ಕಸಿದುಕೊಳ್ಳುವ ಕ್ರಮವು ಈ ದೇಶದಲ್ಲಿ ಕಾನೂನುಬಾಹಿರವಾದದ್ದು ಬಿ.ಆರ್ ಅಂಬೇಡ್ಕರ್ ಕೊಟ್ಟದಂತಹ ಸಂವಿಧಾನದಲ್ಲಿ ಪ್ರತಿಯೊಬ್ಬರು ಒಂದು ಮತದಾನವನ್ನು ನೀಡುವುದರ ಮೂಲಕ ಪ್ರತಿಯೊಬ್ಬರ ಮತದಾನವು ಒಂದೇ ಆಗಿರುವುದು ಪ್ರಜಾಪ್ರಭುತ್ವದ ವೈಭವವಾಗಿದೆ. ಇದನ್ನು ಸಹಿಸದ ಬಿಜೆಪಿ ಧರ್ಮ-ಜಾತಿ ಮದ್ಯಕ್ಕೆ ತರುವ ಮೂಲಕ ಜನರಲ್ಲಿ ಕಂದಕವನ್ನು ಏರ್ಪಾಡುಮಾಡಿ ಅಭಿವೃದ್ದಿ ಕೆಲಸಗಳನ್ನು ನಡೆಸದೇ ಮತವನ್ನು ಕಳ್ಳತನ ಮಾಡಿ ಮಹಾರಾಷ್ಟ್ರ ಗುಜರಾತ್ ಮುಂತಾದ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುವ ಮೂಲಕ ಈ ದೇಶದಲ್ಲಿ ಮತ ಕಳ್ಳತನದ ಮೂಲಕವೇ ಅಧಿಕಾರಕ್ಕೆ ಬಂದಿರುವುದು ತುಂಬಾ ಸ್ವಷ್ಟವಾಗಿ ಕಾಣುತ್ತದೆ. ಈ ಬಗ್ಗೆ ರಾಹುಲ್ ಗಾಂಧಿಯವರು ನೀಡಿದಂತಹ ಅನೇಕ ಉದಾಹರಣೆಗಳು ಇದಕ್ಕೆ ಕಾರಣವಾಗಿದೆ ಇದಕ್ಕೆ ಉತ್ತರಿಸದಂತಹ ಬಿಜೆಪಿಯವರು ಇವತ್ತು ಮತಗಳ್ಳತನದ ಬಗ್ಗೆ ಏನೇನೋ ಮಾತನಾಡದೇ ಮೌನವಾಗಿರುವುದು ಈ ದೇಶದ ಪ್ರಜಾಪ್ರಭುತ್ವಕ್ಕೆ ದಕ್ಕೆ ಉಂಟುಮಾಡಿದೆ ಎಂದು ತಿಳಿಸಿದರು. ಈ ಸಮಾರಂಭದಲ್ಲಿ ಮಾಜಿಶಾಸಕರಾದ ಜೆ.ಅರ್. ಲೋಬೋ ರವರು ಮಾತನಾಡಿ ಮತಗಳ್ಳತನ ಮಂಗಳೂರು ನಗರದಲ್ಲಿ ಯೂ ನಡೆದಿದ್ದು ಇದಕ್ಕೆ ಬೇಕಾದಷ್ಟು ಪುರಾವೆಗಳಿವೆ ಈ ಬಗ್ಗೆ ನಾನು ನ್ಯಾಯಾಲಯದಲ್ಲಿಯೂ ಪ್ರಶ್ನೆ ಮಾಡಿರುವುದಾಗಿಯೂ ತಿಳಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಮೂಡ ಅಧ್ಯಕ್ಷರಾದ ಡಾ| ಬಿ.ಜಿ. ಸುವರ್ಣರವರು, ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾದಂತಹ ಮಂಜುಳಾ ನಾಯಕ್‌ರವರು, ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್‌ನ ರೂಪಾ ಚೇತನ್ ರವರು, ಯುವ ಕಾಂಗ್ರೆಸ್ ನ ಅಧ್ಯಕ್ಷರಾದ ಒಲ್ವಿನ್ ಕಾಸ್ತಲಿನೋರವರು ಮನಪಾ ಸದಸ್ಯರಾದ ಪಣಿಕ್ಕರ್‌ರವರು ಮುಂತಾದವರು ಸಭೆಯಲ್ಲಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಪ್ರಕಾಶ್ ಸಾಲ್ಯಾನ್ ರವರು ವಹಿಸಿದ್ದರು. ಪ್ರಾರಂಭದಲ್ಲಿ 150ಕ್ಕೂ ಅಧಿಕ ಮಂದಿ ಬಂದು ಸ್ವಯಂ ಪ್ರೇರಿತರಾಗಿ ಸಹಿಯಯನ್ನುಮಾಡುವುದರ ಮೂಲಕ ರಾಹುಲ್ ಗಾಂಧಿಯವರ ಹೋರಾಟವನ್ನು ಬೆಂಬಲಿಸಿದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಾದ ಪಿ.ಸಿ ಗಣೇಶ್ ಸ್ವಾಗತಿಸಿದರು, ಚೇತನ್ ಇವರು ವಂದಿಸಿದರು.
ಮಾಜಿ ಕಾರ್ಪೋರೇಟರ್‌ಗಳಾದ ಪ್ರೇಮ್ ಬಲ್ಲಾಳ್‌ಬಾಗ್, ತನ್ವೀರ್ ಷಾ, ಸತೀ಼ ಪೆಂಗಲ್, ಕಾಂಗ್ರೆಸ್ ನಾಯಕಾದ ಟಿ.ಕೆ.ಸುಧೀರ್, ಆಲ್ಟೇನ್ ಡಿʼಕುನ್ಹ ಮೀನಾ ಟೆಲ್ಲಿಸ್, ರಿತೇಶ್ ಶಕ್ತಿನಗರ, ಯೋಗೇಶ್ ನಾಯಕ್, ಜೇಮ್ಸ್ ಪ್ರವೀಣ್, ಶಾಂತಲಾ ಗಟ್ಟಿ, ಚಂದ್ರಹಾಸ ಪೂಜಾರಿ ಕೋಡಿಕಲ್ ಮುಂತಾದವರು ಉಪಸ್ಥಿತರಿದ್ದರು.

