ಮಂಗಳೂರು: ಕಾವೇರಿ ಎನ್ ಶೆಟ್ಟಿ ನಿಧನ

0
127

ಮಂಗಳೂರು: ಹಳೆಯ ತಲೆಮಾರಿನ ಹಿರಿಯ ಯಕ್ಷಗಾನ ಅರ್ಥಧಾರಿ ದಿ| ಎ.ಕೆ. ನಾರಾಯಣ ಶೆಟ್ಟಿ ಫರಂಗಿಪೇಟೆ ಅವರ ಧರ್ಮಪತ್ನಿ ಶ್ರೀಮತಿ ಕಾವೇರಿ ಎನ್. ಶೆಟ್ಟಿಯವರು ವಯೋ ಸಹಜ ಅನಾರೋಗ್ಯದಿಂದ ಅಕ್ಟೋಬರ್ 18ರಂದು ಬಜಪೆಯ ತಮ್ಮ ಮಗಳ ಮನೆಯಲ್ಲಿ ನಿಧನರಾದರು‌. ಅವರಿಗೆ 97 ವರ್ಷ ವಯಸ್ಸಾಗಿತ್ತು.
ಮೂಲತಃ ಪೆರುವಾಯಿ ಗುತ್ತು ಮನೆತನದವರಾದ ಕಾವೇರಿ ಅವರಿಗೆ ಎರಡು ಗಂಡು ಹಾಗೂ ಆರು ಮಂದಿ ಹೆಣ್ಣು ಮಕ್ಕಳು. ಪತಿಯ ಸೋದರಳಿಯ ಮಹೇಶ್ ಮೋಟಾರ್ಸ್ ಮಾಲಕ ಎ.ಕೆ. ಜಯರಾಮ ಶೇಖ ಸೇರಿದಂತೆ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ. ಜಯರಾಮ ಶೇಖ ಅವರು ತಮ್ಮ ಸೋದರ ಮಾವನ ನೆನಪಿಗಾಗಿ ಯಕ್ಷಾಂಗಣ ಮಂಗಳೂರು ಆಶ್ರಯದಲ್ಲಿ ಕಳೆದ 12 ವರ್ಷಗಳಿಂದ ನಡೆಸುತ್ತಿದ್ದ ‘ದಿ‌.ಎ.ಕೆ ನಾರಾಯಣಶೆಟ್ಟಿ ಸಂಸ್ಮರಣ ಕಾರ್ಯಕ್ರಮ’ದಲ್ಲಿ ಉತ್ಕಟ ಕಲಾಪ್ರೇಮಿಯಾಗಿದ್ದ ಕಾವೇರಿ ಶೆಟ್ಟಿಯವರು ಪ್ರತಿವರ್ಷ ತಪ್ಪದೆ ಭಾಗವಹಿಸುತ್ತಿದ್ದರು. ಶನಿವಾರ ಬಜಪೆಯಲ್ಲಿ ಜರಗಿದ ಅವರ ಅಂತ್ಯವಿಧಿಯಲ್ಲಿ ಊರವರು ಹಾಗೂ ಬಂಧುಗಳು ಅಪಾರ ಸಂಖ್ಯೆಯಲ್ಲಿ ಸೇರಿ ಚರಮಾಂಜಲಿ ಅರ್ಪಿಸಿದರು.

LEAVE A REPLY

Please enter your comment!
Please enter your name here