ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಶ್ರೀ ಉಮಾಮಹೇಶ್ವರ ದೇವಸ್ಥಾನ , ರಥ ಬೀದಿ , ಮಂಗಳೂರು ಇಲ್ಲಿ ಸುರಮಣಿ ಮಹಾಲಕ್ಷ್ಮಿ ಶೆಣೈ ಯವರ ಸಂಗೀತ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ತಬಲಾ ಸಾಥಿಯಲ್ಲಿ ವಿಘ್ನೇಶ್ ಪ್ರಭು ಮೂಡಬಿದ್ರೆ, ಹಾರ್ಮೋನಿಯಂ ನಲ್ಲಿ ವಿಶ್ವನಾಥ್ ಭಟ್ ಎಣ್ಣೆಹೊಳೆ, ತಾಳದಲ್ಲಿ ರಘುನಂದನ್ ಕಾಮತ್ ಸಾಥ್ ನೀಡಿದರು. ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರು ಭವಾನಿ ಶಂಕರ್ ಕಂಡ್ಲೂರು, ವಿನೋದ್ ಬೊಂಡಾಲ , ಅರುಣ್ ಪಂಡಿತ್ ಹಾಗೂ ಸಮಿತಿಯ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

