ಮಂಗಳೂರು: ‘ನಂಬಿಯೋ’ ಎಂಬ ಸ್ವತಂತ್ರ ಜಾಗತಿಕ ಬಳಕೆದಾರರ ಡಾಟಾಬೇಸ್ 2025ರ ಮಧ್ಯಂತರ ವರದಿಯಲ್ಲಿ ಮಂಗಳೂರು ಭಾರತದ ಅತ್ಯಂತ ಸುರಕ್ಷಿತ ನಗರವಾಗಿ ಮೊದಲ ಸ್ಥಾನ ಪಡೆದಿದೆ. ವಿಶ್ವದ 393 ನಗರಗಳ ಪೈಕಿ 19ನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಭಾರತದ 23 ನಗರಗಳು ಸ್ಥಾನ ಪಡೆದಿದೆ. ಇದರಲ್ಲಿ ಮಂಗಳೂರು 71.2 ಅಂಕಗಳೊಂದಿಗೆ 19ನೇ ಸ್ಥಾನದಲ್ಲಿದೆ. ವಡೋದರ 85ನೇ ಸ್ಥಾನ ಮತ್ತು ಅಹಮದಾಬಾದ್ 93ನೇ ಸ್ಥಾನವನ್ನು ಪಡೆದಿವೆ.