ಮಂಗಳೂರು : ‘ವಸಂತ ಸಂಗೀತೋತ್ಸವ’

0
5

ಮಂಗಳೂರು : ಇಲ್ಲಿಯ ದಿ ಗೌಡ್ ಸಾರಸ್ವತ ಬ್ರಾಹ್ಮಣ ಸೇವಾ ಸಂಘವು ಶ್ರೀ ನಾರಾಯಣಿ ಸಂಗೀತ ಕಲಾ ಕೇಂದ್ರಇವರ ಸಹಯೋಗದಲ್ಲಿ ಹವಾನಿಯಂತ್ರಿತ ಸುಜೀರ್ ಸಿ. ವಿ. ನಾಯಕ್ ಸಭಾಂಗಣದಲ್ಲಿ ಹಿಂದುಸ್ಥಾನಿ ಸಂಗೀತ ಪ್ರಿಯರನ್ನುರಂಜಿಸಲು ‘ವಸಂತ ಸಂಗೀತೋತ್ಸವ’ವನ್ನು ಮಾರ್ಚ್ 15 ರ ಭಾನುವಾರ ಸಂಜೆ 4:00 ರಿಂದರಾತ್ರಿ 8:00 ರವರೆಗೆ ನೆರವೇರಿಸಿತ್ತು.

ಸುಮಾರು 500ಕ್ಕೂ ಮಿಕ್ಕಿ ಸಂಗೀತ ಪ್ರಿಯರ ಸಮ್ಮುಖ ನಡೆದ ಈ ಕಾರ್ಯಕ್ರಮದಲ್ಲಿ ವಿದುಷಿ ನಂದಿತಾ ಪೈ, ವಿಭಾ ನಾಯಕ್, ಶಾಂತೇರಿಕಾಮತ್ ಮತ್ತು ವಿದುಷಿ ಮೇಘಾ ಪೈ ಸೇರಿದಂತೆ ಪ್ರತಿಭಾನ್ವಿತಯುವಕಲಾವಿದರು ಸುಮಾರು ನಾಲ್ಕು ಗಂಟೆಗಳ ಕಾಲ ಸುಮಧುರ ಹಿಂದೂಸ್ತಾನಿ ಗಾಯನ ಸಂಗೀತ ಪ್ರದರ್ಶನಅಲ್ಲದೇ ಸಾಂಪ್ರದಾಯಿಕ ಶಾಸ್ತ್ರೀಯ ರಾಗಗಳಿಗೆ ಹೊಂದಿಸಲಾದ ವಿಶೇಷ ಕೊಂಕಣಿ ಸಂಯೋಜನೆಗಳ ಪ್ರಸ್ತುತಿ ಮಾಡಿದರು. ಯುವ ಬಾನ್ಸುರಿ ವಾದಕ ಪಿ. ಕಾರ್ತಿಕ್ ಭಟ್‌ಅವರಿಂದಆತ್ಮವನ್ನು ಕಲಕುವ ಬಾನ್ಸುರಿ ವಾದನ ಕೂಡಾ ಜರಗಿತು.

ಶ್ರೀವತ್ಸ ಭಟ್ ಮತ್ತುರಾಜೇಶ್ ಭಾಗವತ್‌ತಬಲಾದಲ್ಲಿ ಮತ್ತು ಮೇಧಾ ಭಟ್ ಮತ್ತು ಹೇಮಂತ್ ಭಾಗವತ್ ಹಾರ್ಮೋನಿಯಂನಲ್ಲಿ ಸಾಥ ನೀಡಿದರು. ದಿ ಗೌಡ್ ಸಾರಸ್ವತ ಬ್ರಾಹ್ಮಣ ಸೇವಾ ಸಂಘದಅಧ್ಯಕ್ಷರಾದಡಾ. ಕಸ್ತೂರಿ ಮೋಹನ್ ಪೈ ಅವರುಅತಿಥಿಕಲಾವಿದರಾಗಿ ಪ್ರದರ್ಶನ ನೀಡಿದರು. ಈ ಸಾಂಸ್ಕೃತಿಕಕಾರ್ಯಕ್ರಮವನ್ನುಎನ್. ಕೆ. ಜಿ. ಎಸ್. ಬಿ ಕೋ-ಆಪರೇಟಿವ್ ಬ್ಯಾಂಕ್, ಐಡಿಯಲ್‌ಐಸ್‌ಕ್ರೀಮ್, ಯೂನಿಯನ್ ಬ್ಯಾಂಕ್, ಸ್ಕೂಲ್ ಬುಕ್ ಕಂಪನಿ ಮತ್ತು ಭಾರತ್‌ಗ್ರೂಪ್‌ಆಫ್ ಕಂಪನಿಗಳು ಪ್ರಾಯೋಜಿಸಿದ್ದರು.

ಸೇವಾ ಸಂಘದಅಧ್ಯಕ್ಷಡಾ. ಕಸ್ತೂರಿ ಮೋಹನ್ ಪೈ, ಕಾರ್ಯದರ್ಶಿ ಡಾ. ರಮೇಶ್ ಪೈ ಎ., ಖಜಾಂಚಿ ಕುಂಬಳೆ ನರಸಿಂಹ ಪ್ರಭು, ಶ್ರೀ ನಾರಾಯಣಿ ಸಂಗೀತ ಕಲಾ ಕೇಂದ್ರದ ಸಂಸ್ಥಾಪಕಿ ವಿದುಷಿ ನಂದಿತಾ ಪೈ, ಯಜ್ಞವಂತ ಪೈ, ಐಡಿಯಲ್‌ಐಸ್‌ಕ್ರೀವiನಜಯಾಕಾಮತ್, ಎನ್. ಕೆ. ಜಿ. ಎಸ್. ಬಿ ಕೋ-ಆಪರೇಟಿವ್ ಬ್ಯಾಂಕ್‌ನಕಿರಣ್‌ಕುಮಾರ ನಾಯಕ, ಯೂನಿಯನ್ ಬ್ಯಾಂಕ್‌ನಪೂರ್ಣಚAದ್ರ ನಾಯ್ಡು ಮತ್ತಿತರರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಚಿತ್ರಾಎಸ್. ಶೆಣೈ ಮತ್ತು ಮಂಗಳಾ ಭಟ್‌ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯದರ್ಶಿ ಡಾ. ರಮೇಶ ಪೈ ವಂದಿಸಿದರು. ಎಂ. ಆರ್. ಕಾಮತ ಮತ್ತುಗೋವಿಂದರಾಯ ಪ್ರಭುಅವರುಕಲಾವಿದರ ಪರಿಚಯ ನೀಡಿದರು. ಡಾ. ಕಸ್ತೂರಿ ಮೋಹನ ಪೈ, ಬಿ. ಆರ್. ಶೆಣೈ, ಜಿ. ಮಾಧವರಾಯ ಪ್ರಭು, ಅರವಿಂದಆಚಾರ್ಯ, ವಿಜಯಚಂದ್ರಕಾಮತ, ಮೋಹನದಾಸ ಪೈ, ಪ್ರತಿಮಾ ಪ್ರಭುಕಲಾವಿದರನ್ನು ಸನ್ಮಾನಿಸಿದರು.

LEAVE A REPLY

Please enter your comment!
Please enter your name here