ಮಂಗಳೂರು ಸ್ಟೋರ್ ಜಪ್ಪು ಇದರ ಸುವರ್ಣ ಸಂಭ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಯಶಸ್ವಿ

0
5

ಮಂಗಳೂರು ಸ್ಟೋರ್ ಜಪ್ಪು ಇದರ ಸುವರ್ಣ ಸಂಭ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜಪ್ಪು ಮೋರ್ಗನ್ಸ್‌ ಗೇಟ್‌ನ ಪಾಲೆಮಾರ್ ಗಾರ್ಡನ್‌ನಲ್ಲಿ ಶುಕ್ರವಾರ ನಡೆಯಿತು. ನೇಹ ರಕ್ಷಿತ್ ಪ್ರಾರ್ಥನೆ ಮಾಡಿದರು.

ಉದ್ಘಾಟಿಸಿದ ಶ್ರೀ ರಾಧಾಕೃಷ್ಣ ದೇವಸ್ಥಾನದ (ಬಾಳಂಭಟ್ ಮನೆತನ) ವಿದ್ವಾನ್ ಡಾ| ಸತ್ಯಕೃಷ್ಣ ಭಟ್ ಮಾತನಾಡಿ, ಸುವರ್ಣ ಸಂಭ್ರಮದ ಜತೆ ಭೀಮರಥ ಶಾಂತಿ ಹೋಮವೂ ಅಚ್ಚುಕಟ್ಟಾಗಿ ನಡೆದಿದೆ. 70ನೇ ವರ್ಷದಲ್ಲಿ ಮಾಡುವ ಸತ್ಕರ್ಮವಿದು. ಭಗವಂತ ಕೊಟ್ಟ ಸಂಪತ್ತಿನಿಂದ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಬೇಕು. ಈ ಮೂಲಕ ಖುಷಿ ಪರಂಪರೆಯನ್ನು ಮುಂದುವರಿಸುವುದು ನಮ್ಮ ಆದ್ಯ ಕರ್ತವ್ಯ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕತೆಯ ಸಮ್ಮಿಲನವಾಗಿ ಈ ಕಾರ್ಯಕ್ರಮದಲ್ಲಿ ನಡೆಯುತ್ತಿರುವುದು ವಿಶೇಷ, ಭಾಸ್ಕರ್ ರಾವ್ ಅವರು ಸದಾ ಕ್ರೀಯಾಶೀಲರಾಗಿದ್ದು ಸಾಮಾಜಿಕ ಚಟುವಟಿಕೆಗಳಲ್ಲಿ ಜೋಡಿಸಿಕೊಂಡಿದ್ದಾರೆ ಎಂದು ಹೇಳಿದರು.’

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, ಐವತ್ತು ವರ್ಷಗಳ ನಿರಂತರ ಕಾಲ ವ್ಯಾಪಾರೋದ್ಯಮ ಬೆಳೆದು, ಸಮಾಜಕ್ಕೆ ಸೇವೆ ನೀಡಿರುವುದುಖುಷಿಯ ವಿಚಾರ, ಭಾಸ್ಕರ್ ರಾವ್ ಅವರ ಮಾಲಕತ್ವದ ಮಂಗಳೂರು ಸ್ಟೋರ್ ಖ್ಯಾತಿ ಪಡೆದಿದ್ದು, ಸಮಾಜಕ್ಕೆ ಸದ್ದಿಲ್ಲದೆ, ಹಲವು ಸೇವೆಯನ್ನು ನೀಡುತ್ತಿದ್ದಾರೆ ಎಂದರು.

ಕೃಷ್ಣ ಜೆ. ಪಾಲೆಮಾರ್, ಡಾ|ಮಾಲತೆ ಹೆಗ್ಡೆ, ಎಂ.ಎಸ್.ಪದಕಣ್ಣಾಯ, ರೆಮೋನಾ ಇವೆಟ್ ಪಿರೇರಾ, ಶಿಲ್ಪಾ ಸಂತೋಷ್ ಅವರನ್ನು ಸನ್ಮಾನಿಸಲಾಯಿತು.

ಮಂಗಳೂರು ಸ್ಟೋರ್ ಮಾಲಕ, ಮಾಜಿ ಮನಪಾ ಸದಸ್ಯ ಕೆ. ಭಾಸ್ಕರ್ ರಾವ್ ಸ್ವಾಗಿತಿಸಿ, ಪ್ರಾಸ್ತಾವಿಸಿ, 1976ರಲ್ಲಿ ಆರಂಭವಾದ ಮಂಗಳೂರು ಸ್ಟೋರ್ ಸುವರ್ಣ ಸಂಭ್ರಮ ಆಚರಿಸುತ್ತಿದ್ದು, ನಮ್ಮ ಸೇವೆ ನಿರಂತರವಾಗಿ ನಡೆಯಲಿದೆ ಎಂದರು.

7 ದೀಪದಲ್ಲಿ 70 ಬತ್ತಿಗಳ ಉರಿಸುವಿಕೆಯೊಂದಿಗೆ 70ನೇ ವರ್ಷದ ಕಾರ್ಯಕ್ರಮ ನಡೆಯಿತು.

ಪ್ರಸಾದ್ ನೇತ್ರಾಲಯದವರಿಂದ ಉಚಿತ ಕಣ್ಣಿನ ಪರೀಕ್ಷೆ , ಜಪ್ಪು ಆರೋಗ್ಯ ಕೇಂದ್ರದವರಿಂದ ಬಿಪಿ, ಸುಗರ್, ರಕ್ತ ಪರೀಕ್ಷೆಯ ಶಿಬಿರದಲ್ಲಿ ಹೆಚ್ಚಿನ ಸದಸ್ಯರು ಭಾಗವಹಿಸಿದರು.

ನೇಹ ರಕ್ಷಿತ್ ರವರ ಸುಗಮ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಲ್ಲಿ ಕೆ. ರವೀಂದ್ರ ರಾವ್ ಪುತ್ತೂರು ಸಂತೋಷ್ ಕುಮಾರ್ ಕಾರ್ಕಳ- ಸೂರ್ಯಕಲ- ಪದ್ಮನಾಭ ಕುಮಾರ್ ಅಂತರಾಷ್ಟ್ರೀಯಾ ಸ್ಫೋಟ್ಸ್ ಮ್ಯಾನ್ ಸಹಕರಿಸಿದರು. ಕಾರ್ಯಕ್ರಮಕ್ಕೂ ಮುನ್ನ ವಿದುಷಿ ವಿನಯಾ ರಾವ್ ಅವರ ಮಾರ್ಗದರ್ಶನದಲ್ಲಿ ಧನಿ ರಾವ್ ಅವರಿಂದ ಭರತನಾಟ್ಯ ನಡೆಯಿತು. 50ನೇ ವರ್ಷದ ಸುವರ್ಣ ಸಂಭ್ರಮದ ಸವಿನೆನಪಿಗೆ 50 ಹಿರಿಯ ಗ್ರಾಹಕರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ: ಸುಧೀರ್ ಶೆಟ್ಟಿ ಕಣ್ಣೂರು, ಶಶಿಧರ ಹೆಗ್ಡೆ, ವೈದ್ಯೆ ಡಾ|ಮಾಲತಿ ಹೆಗ್ಡೆ, ನೇತ್ರ ತಜ್ಞ ಡಾ। ಕೃಷ್ಣಪ್ರಸಾದ್ ಕೂಡ್ಲು, ಪ್ರಸಾದ್ ನೇತ್ರಾಲಯದ ನಿರ್ದೇಶಕಿ, ರಶ್ಮಿ ಕೃಷ್ಣಪ್ರಸಾದ್, ಸುರೇಶ್ ಕುಮಾರ್ ಉಡುಪಿ, ಗುರುವನ ದೇವಸ್ಥಾನದ ಟ್ರಸ್ಟಿ ಜೆ. ಕೊರಗಪ್ಪ, ಉದ್ಯಮಿ ಎಂ. ಎಸ್. ಪದಕಣ್ಣಾಯ, ನೂರ್ ಮಹಮ್ಮದ್ ಎನ್‌ಮಾರ್ಕ್ ಬಿಲ್ಡರ್ಸ್ ವಾರಿಜಾ ಕೊರಗಪ್ಪ, ಶೋಭಾ ಸುರೇಶ್, ಸುಪ್ರಿತ್ ಜೆ.ಕೆ., ಲಿಲ್ಲಿ ಪಡೀಲ್, ಧನ್ವಿ ರಾವ್, ವಿಜೇತಾ ಸುಪ್ರೀತ್, ಸುಮಿತ್ರಾ ಜಪ್ಪು, ಪೂರ್ಣಿಮಾ ಭಾಸ್ಕರ್ ರಾವ್ ಸಹಿತ ಮತ್ತಿತರರು ಇದ್ದರು. ಶ್ರೀಮತಿ ಉಷಾ ಭವಾನಿ ಶಂಕರ್, ಕಲ್ಪನಾ ವೆಂಕಟೇಶ್, ಯೋಗೀಶ್ ಕುಮಾರ್ ಜಪ್ಪು ಕಾರ್ಯಕ್ರಮ ಸಂಯೋಜಿಸಿದರು. ಸಂದೀಪ್, ಉಮೇಶ್ ಬೆಂಗಳೂರು. ರತನ್ ಕುಮಾರ್ ಸಹಕಾರ ನಿಡಿದರು. ರಾಷ್ಟ್ರಗೀತೆ ಬಳಿಕ ಸಹಭೋಜನ, ಸಂಗೀತ ಕಾರ್ಯಕ್ರಮ ನೆರವೇರಿತು.

ಮಂಗಳೂರು ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರು, ನಿರ್ದೇಶಕರು, ಕಾರ್ಯದರ್ಶಿ ಚಂದ್ರಿಕ ಡಿ. ರಾವ್, ವಸಂತ್ ಶೆಟ್ಟಿ, ಹೆಚ್ಚಿನ ಸದಸ್ಯರು ಭಾಗವಹಿಸಿ ಸಹಕರಿಸಿದರು. ಯೋಗೀಶ್ ಕುಮಾರ್ ಜಪ್ಪು ವಂದಿಸಿದರು.

LEAVE A REPLY

Please enter your comment!
Please enter your name here