
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿಯ ವಾಣಿಜ್ಯ ವಿಭಾಗ ಮತ್ತು ಯೂನಿಯನ್ ಬ್ಯಾಂಕ್ ಚೇರ್ ವತಿಯಿಂದ ಮಾನವ ಸಂಪನ್ಮೂಲ ವಿಭಾಗವು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಇಗ್ನಿರ – 2025 ಎಚ್. ಆರ್. ಇವೆಂಟ್ ಇತ್ತೀಚಿಗೆ ನಡೆಯಿತು.
ಮುಖ್ಯ ಅತಿಥಿಗಳಾದ ಮಂಗಳೂರು ಪ್ರೈಮಸಿ ಇಂಡಸ್ಟ್ರಿ ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷರಾದ ರಾಘವೇಂದ್ರ ರಾವ್ ಸಣ್ಣಯ್ಯ ಉದ್ಘಾಟಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಿಭಾಗದ ಅಧ್ಯಕ್ಷರಾದ ಡಾ. ಪ್ರೀತಿ ಕೀರ್ತಿ ಡಿಸೋಜಾ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಪ್ರೊಫೆಸರ್. ಪರಮೇಶ್ವರ, ಪ್ರೊಫೆಸರ್. ವೇದವ ಪಿ, ಉಪನ್ಯಾಸಕರಾದ ಡಾ. ದಿನಕರ ಕೆಂಜೂರು, ಡಾ. ರಮ್ಯ ಕೆ. ಆರ್. ವೈಶಾಲಿ ಕೆ. ಮತ್ತು ಸಿ. ಲಹರಿ ಉಪಸ್ಥಿತರಿದ್ದರು.
ಜೀವಿಕ ಮತ್ತು ತಂಡದವರು ಪ್ರಾರ್ಥಿಸಿದರು. ಜೀವಿಕ ಸ್ವಾಗತಿಸಿದರು. ಡಾ. ರಮ್ಯ ಕೆ. ಆರ್ ಇವೆಂಟ್ನ ನ ಕುರಿತು ಮಾತನಾಡಿದರು. ಎಲ್ವಿಟ್ ಡಿಸೋಜಾ ವಂದಿಸಿದರು. ಆಫ್ನ ಕಾರ್ಯಕ್ರಮದ ನಿರೂಪಣೆಗೈದರು.
ಉದ್ಘಾಟನೆ ಕಾರ್ಯಕ್ರಮದ ಬಳಿಕ ಎಚ್ ಆರ್ ಇವೆಂಟ್ ನ ವಿವಿಧ ವಿಭಾಗಗಳ ಸ್ಪರ್ಧೆ ನಡೆಯಿತು. ಮುಖ್ಯವಾಗಿ ಕ್ವಿಜ್, ಮಲ್ಟಿ ಟಾಸ್ಕಿಂಗ್, ಜಾಬ್ ಡಿಸ್ಕರಿಪ್ಶನ್ ಮತ್ತು ಕೇಸ್ ಸ್ಟಡಿ ಅನಾಲಿಸಿಸ್ ನಡೆಯಿತು. ಇವೆಂಟ್ ಸ್ಪರ್ಧೆಯಲ್ಲಿ ರಾಜೇಶ್ ಬಿ.ಸಿ. ಮತ್ತು ಅನುಷ ಬಿ. ಎನ್. ಪ್ರಥಮ ಸ್ಥಾನ ಗಳಿಸಿದರೆ ಸಜೀಲ ಕೆ. ಮತ್ತು ಪ್ರತೀಕ್ಷ ದ್ವಿತೀಯ ಸ್ಥಾನವನ್ನು ಗಳಿಸಿದರು.


