ಮಂಗಳೂರು ವಿವಿ: ಉದ್ಯೋಗಾಹರ್ತೆ ಕೌಶಲ್ಯಗಳ ಕುರಿತು ಉಪನ್ಯಾಸ

0
47

ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದಲ್ಲಿ ಉದ್ಯೋಗಾಹರ್ತೆ ಕೌಶಲ್ಯಗಳ ಕುರಿತು ವಿಶೇಷ ಉಪನ್ಯಾಸ ನಡೆಯಿತು. ಎಚ್ ಸಿಎಸ್ ಇಂಡಿಯ ಕನ್ಸಲ್ಟೆಂಟ್ ಪ್ರೈವೇಟ್. ಲಿಮಿಟೆಡ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಯ ತರಬೇತುದಾರರಾದ ಜಿಂನ್ಸಿ ಜಿಯೋ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಾ ವಿದ್ಯಾರ್ಥಿ ದಿಶೆಯಲ್ಲಿರುವಾಗಲೇ ಕೌಶಲ್ಯಗಳ ಅಭಿವೃದ್ಧಿ ಪಡಿಸುವುದು ಬಹಳ ಅಗತ್ಯವಾಗಿದೆ. ಮುಖ್ಯವಾಗಿ ಸಂವಹನ ಕಲೆ, ನಾಯಕತ್ವ ಗುಣ, ಸಮಯ ನಿರ್ವಹಣೆ, ತಂಡದಲ್ಲಿ ಕೆಲಸ ಮಾಡುವ ಕೌಶಲ್ಯ, ಸ್ವಯಂ ಪ್ರೇರಣೆ ಮತ್ತು ನೈತಿಕತೆ ಮತ್ತು ಶಿಸ್ತು ಕರಗತ ಮಾಡಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಉದ್ಯೋಗ ನೀಡಬಯಸುವ ಕಂಪನಿ ಮತ್ತು ಸಂಸ್ಥೆಗಳು ದಕ್ಷತೆ ಮತ್ತು ಪರಿಣಾಮಕಾರಿ ಫಲಿತಾಂಶಗಳಿಗೆ ಹೆಚ್ಚು ಹೆಚ್ಚು ಮಹತ್ವ ನೀಡುತ್ತಿವೆ. ಆದುದರಿಂದ ಕಲಿಕೆಯೊಂದಿಗೆ ಕೌಶಲ್ಯಗಳ ಉನ್ನತಿಕರಣ ನಿರಂತರವಾಗಿರಬೇಕು. ಇದರಿಂದ ನಾವು ಉದ್ಯೋಗದಲ್ಲಿ ಯಶಸ್ಸು ಕಾಣಬಹುದು ಎಂದು ನುಡಿದರು.


ವೇದಿಕೆಯಲ್ಲಿ ಉಪನ್ಯಾಸಕರಾದ ಡಾ. ದಿನಕರ ಕೆಂಜೂರು, ಡಾ. ರಮ್ಯ ಕೆ. ಆರ್, ವೈಶಾಲಿ ಕೆ. ಮತ್ತು ಸಿ. ಲಹರಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅನುಷಾ ಬಿ. ಎಮ್. ಸ್ವಾಗತಿಸಿದರೆ, ಜೀವಿತಾ ವಂದಿಸಿದರು.

LEAVE A REPLY

Please enter your comment!
Please enter your name here