ಮೂಡುಬಿದಿರೆ : ಇಲ್ಲಿಯ ಶ್ರೀ ಮಹಾವೀರಕಾಲೇಜಿನ ಜಿ.ವಿ. ಪೈ.ಕ್ರೀಡಾಂಗಣದಲ್ಲಿ ನಡೆದ ಅಂತಿಮ ಸುತ್ತಿನ ಉಡುಪಿ ವಲಯ ಮಟ್ಟದ ಪುರುಷರ ಕ್ರಿಕೆಟ್ಪಂದ್ಯಾವಳಿಯಲ್ಲಿ ಆಳ್ವಾಸ್ ಕಾಲೇಜು ತನ್ನ ಎದುರಾಳಿ ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಗಳಿಸಿತು.
ನಿಗದಿತ 20 ಓವರ್ಗಳ ಈ ಪಂದ್ಯದಲ್ಲಿ ಸಮಬಲದ ಹೋರಾಟ ನಡೆದು, ಸೂಪರ್ ಓವರ್ನಲ್ಲಿ ಆಳ್ವಾಸ್ ತಂಡ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿತು. ಎಸ್.ಎಂ.ಎಸ್ಕಾಲೇಜು ಬ್ರಹ್ಮಾವರ ತಂಡ ದ್ವಿತೀಯ ಸ್ಥಾನ ಗಳಿಸಿತು. ಶ್ರೀ ಮಹಾವೀರಕಾಲೇಜು ಮೊದಲ ರನ್ನರ್ ಅಪ್ ಸ್ಥಾನ ತನ್ನದಾಗಿಸಿಕೊಂಡರೆ, ಶಿರ್ವದ ಸೈಂಟ್ ಮೇರೀಸ್ ಕಾಲೇಜು ದ್ವಿತೀಯ ರನ್ನರ್ ಅಪ್ ಸ್ಥಾನ ಪಡೆಯಿತು.
ಜಿ. ವಿ. ಪೈ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಉಡುಪಿ ವಲಯಮಟ್ಟದ ಪುರುಷರ ಕ್ರಿಕೆಟ್ ಪಂದ್ಯಾವಳಿಯ ಅಬ್ಸರ್ವರ್ ಆಗಿ ಕಾರ್ಯನಿರ್ವಹಿಸಿದ ರತ್ನಾಕರ ಪುತ್ರಾಯ ಅವರು ಈ ಪಂದ್ಯಾವಳಿಯ ಕುರಿತು ವರದಿ ವಾಚಿಸಿದರು. ಈ ಕ್ರಿಕೆಟ್ ಪಂದ್ಯಾವಳಿಯ ಸಂಚಾಲಕರಾದ ಮಹಾವೀರ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಅಕ್ಷಿತ್ರೈ ಈ ಪಂದ್ಯಾವಳಿಯ ಬಹುಮಾನಿತರ ಪಟ್ಟಿ ವಾಚಿಸಿದರು.
ಅಧ್ಯಕ್ಷತೆ ವಹಿಸಿದ ಶ್ರೀ ಮಹಾವೀರಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಅಭಯಚಂದ್ರಜೈನ್ಮಾತನಾಡಿ “ತಂಡದಒಗ್ಗಟ್ಟನ್ನು ಹೆಚ್ಚಿಸಿ ವಿಭಿನ್ನ ಕೌಶಲ್ಯಗಳನ್ನು ಬೆಳೆಸುವಕ್ರಿಕೆಟ್ ನಮ್ಮ ಯುವಜನತೆಯ ನೆಚ್ಚಿನಆಟವಾಗಿದೆ ಜೊತೆಗೆ ವ್ಯಕ್ತಿಯ ಮನೋ-ದೈಹಿಕ ಅರೋಗ್ಯವನ್ನು ಸುಸ್ಥಿತಿಯಲ್ಲಿಡಲು ಕ್ರಿಕೆಟ್ ಸಹಾಯಕವಾಗಿದೆ”ಎನ್ನುತ್ತಾ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಿದವರನ್ನು ಮತ್ತು ವಿಜೇತರನ್ನುಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕರಾದ ಡಾ. ಹರಿದಾಸ್, ಶ್ರೀ ಮಹಾವೀರಕಾಲೇಜಿನ ಹಳೆ ವಿದ್ಯಾರ್ಥಿರವಿ ಪೆರೇರಾ, ಎಂ.ಕೆ. ಅನಂತರಾಜ್ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಧನಂಜಯ ಶೆಟ್ಟಿ, ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದಅಧ್ಯಕ್ಷ ನಾಗರಾಜ್ ಬಿ., ಶ್ರೀ ಮಹಾವೀರ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲೆ ಲೆ. ವಿಜಯಲಕ್ಷ್ಮಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್ ಉಪಸ್ಥಿತರಿದ್ದರು.
ಶ್ರೀ ಮಹಾವೀರಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಸ್ವಾಗತಿಸಿದರು, ಅಂತಿಮಬಿ. ಎಸ್ಸಿವಿದ್ಯಾರ್ಥಿನಿ ರಕ್ಷಿತಾ ಶೆಟ್ಟಿಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

