ಮಂಗಳೂರು : ರಾಷ್ಟ್ರೀಯ ಶಿಕ್ಷಣಾ ನಿರ್ದೇಶನಾಲಯ ನವದೆಹಲಿ ಸಂಸ್ಥೆಯ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ 19 ವಯೋಮಿತಿಯ ವಿದ್ಯಾರ್ಥಿಗಳಿಗಾಗಿ ಟೆನ್ನಿಸ್ ಸ್ಪರ್ಧಾ ಕೂಟವನ್ನು ನವದೆಹಲಿಯ ತ್ಯಾಗರಾಜ ಕ್ರೀಡಾಂಗಣದಲ್ಲಿ 29-01-2026 ರಂದು ಆಯೋಜಿಸಲಾಗಿದೆ. ಈ ಸ್ಪರ್ಧಾ ಕೂಟವನ್ನು ಸ್ಕೂಲ್ ಗೇಮ್ಸ್ ಫೆಡರೇಷನ್ ಓಫ್ ಇಂಡಿಯಾ, ಲಕ್ನೋ ಸಂಸ್ಥೆಯು ಸಂಘಟಿಸಲಿರುವುದು.
ನಗರದ ಡಾ. ಎನ್. ಎಸ್. ಎ. ಎಮ್, ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ಕು. ಪ್ರಾಪ್ತಿ ಶೆಟ್ಟಿ, ಸಂತ ಅಲೋಷಿಯಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ದ್ರುವ ಎಮ್. ರಾವ್. ರವರು ರಾಷ್ಟ್ರ ಮಟ್ಟದ ಟೆನ್ನಿಸ್ ಸ್ಪರ್ದಾಕೂಟಕ್ಕೆ ದ. ಕ. ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.
ಇವರು ನಗರದ ರಾಮಕೃಷ್ಣ ಟೆನ್ನಿಸ್ ಕ್ಲಬ್‌ನ ಸದಸ್ಯರಾಗಿದ್ದು ಖ್ಯಾತ ಟೆನ್ನಿಸ್ ತರಬೇತುದಾರರಾದ ಶ್ರೀ ಶುಭಂ ಮಿಶ್ರರವರಿಂದ ತರಬೇತಿ ಪಡೆದಿದ್ದಾರೆ. ಕರ್ನಾಟಕ ರಾಜ್ಯದಿಂದ ಕೇವಲ 5 ಕ್ರೀಡಾಪಟುಗಳು ಈ ಸ್ಪರ್ಧಾಕೂಟಕ್ಕೆ ಆಯ್ಕೆಯಾಗಿದ್ದಾರೆ.

