ಮಂಗಳೂರು: ನಕಲಿ ಚಿನ್ನ ಅಡವಿಟ್ಟು ಬ್ಯಾಂಕಿಗೆ ಪಂಗನಾಮ!; ಮುಹಮ್ಮದ್ ಆಸೀಫ್ ವಿರುದ್ಧ ಕೇಸು

0
14

ಮಂಗಳೂರು: ನಗರದ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ಒಂದರಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಲಕ್ಷಾಂತರ ರೂ. ಸಾಲ ಪಡೆದು ವಂಚಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಗುರುಪುರದ ಅದ್ದೂರು ನಿವಾಸಿ ಮುಹಮ್ಮದ್ ಆಸೀಫ್ ಎಂಬಾತನೇ ಈ ಕೃತ್ಯ ಎಸಗಿದಾತ.

ಈತ ತನ್ನ ಎರಡು ಸಾಲದ ಖಾತೆಗಳಲ್ಲಿ ಐವತ್ತಾರು ಗ್ರಾಂ ತೂಕದ ಚಿನ್ನಾಭರಣ ಅಡವಿಟ್ಟಿದ್ದಾನೆ. ಅಸಲಿ ಚಿನ್ನವೆಂದು ನಂಬಿಸಿ ಒಟ್ಟು ಮೂರು ಲಕ್ಷದ ಮೂವತ್ತಾರು ಸಾವಿರ ರೂ. ಸಾಲ ಪಡೆದು ಎಸ್ಕೇಪ್ ಆಗಿದ್ದಾನೆ.

ಬ್ಯಾಂಕ್ ಗೆ ವಂಚಿಸಿರುವ ಮುಹಮ್ಮದ್ ಆಸೀಫ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಾಖೆಯ ಅಧಿಕಾರಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here