ಮಂಗಳೂರು: ಜಿಲ್ಲಾ ವೆನ್ಲಾಕ್ ಮತ್ತು ಲೇಡಿಗೋಷನ್ ಆಸ್ಪತ್ರೆಗಳ 175 ವರ್ಷಗಳ ಸಂಭ್ರಮಾಚರಣೆ ಪ್ರಯುಕ್ತ ವೆನ್ಲಾಕ್, ಲೇಡಿಗೋಷನ್ ಹಾಗೂ ಕೆಎಂಸಿ ಹಳೆ ವಿದ್ಯಾರ್ಥಿಗಳ ಸಂಘಗಳ ಆಶ್ರಯದಲ್ಲಿ ವೈದ್ಯರ ದಿನದ ಸಂಭ್ರಮಾಚರಣೆ-ಅಭಿವಂದನಾ ಕಾರ್ಯಕ್ರಮ ಇಂದು (ಜು. 10) ವೆನ್ಲಾಕ್ ಜಿಲ್ಲಾಸ್ಪತ್ರೆಯ ಮೂರನೇ ಮಹಡಿಯಲ್ಲಿ ಸಂಜೆ 3-00ರಿಂದ ನಡೆಯಲಿದೆ.

