ಮಂಗಳೂರು: ಕುಟುಂಬ ವೈದ್ಯರ ಸಂಘ (ರಿ.) ಮಂಗಳೂರು ಇದರ ವತಿಯಿಂದ ವೈದ್ಯರ ದಿನಾಚರಣೆ-2025 ಕಾರ್ಯಕ್ರಮವು ಇಂದು ಜು. 11ರಂದು ಸಂಜೆ 7-00 ಗಂಟೆಗೆ ಮಂಗಳೂರು ಬೆಂದೂರ್‌ವೆಲ್‌ನ ಹೊಟೇಲ್ ಮಾಯ ಇಂಟರ್ ನ್ಯಾಶನಲ್ ಇಲ್ಲಿ ಜರಗಲಿದೆ.
ದ.ಕ. ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ. ಅವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಹಾಗೂ ಪಾಕಶಾಲ ಇದರ ಮುಖ್ಯಸ್ಥರಾದ ವಾಸುದೇವಾ ಅಡಿಗ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಹಿರಿಯ ಕುಟುಂಬ ವೈದ್ಯರಾದ ಡಾ. ಸದಾಶಿವ ಅವರಿಗೆ ಅಭಿನಂದನೆ ಕಾರ್ಯಕ್ರಮ ಜರಗಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಕುಟುಂಬ ವೈದ್ಯರ ಸಂಘದ ಅಧ್ಯಕ್ಷರಾದ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಅವರು ವಹಿಸಲಿದ್ದಾರೆ.