ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯ ಪರಿಚಯ; ಬೀಚ್ ಗೆ ಕರೆದೊಯ್ದು ಅತ್ಯಾಚಾರ..!

0
36

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು, ಸೋಮೇಶ್ವರ ಸಮುದ್ರ ತೀರದಲ್ಲಿ ಕಾರಿನಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ ಕುರಿತಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಯ ಅಡ್ಯಾರ್ ವಳಚ್ಚಿಲ್ ನಿವಾಸಿ ಕೆಲ್ವಿನ್ (24) ಎಂದು ಗುರುತಿಸಲಾಗಿದೆ.

ಆರೋಪಿ ಕೆಲ್ವಿನ್ ಅಪ್ರಾಪ್ತೆಯೋರ್ವಳನ್ನ ಇನ್ಟಾಗ್ರಾಮ್ ನಲ್ಲಿ ಪರಿಚಯ ಮಾಡಿಕೊಂಡಿದ್ದ. ಚಾಟಿಂಗಲ್ಲೇ ಆಕೆಯನ್ನ ಪ್ರೀತಿಸೋದಾಗಿ ನಂಬಿಸಿ ಫೋನ್ ಕರೆ ಮಾಡಿ ಕಳೆದ ಗುರುವಾರ ಆರೋಪಿ ಅಪ್ರಾಪ್ತಯನ್ನ ಆಕೆಯ ಮನೆ ಬಳಿಯೇ ಭೇಟಿ ಮಾಡಿದ್ದು, ಕೆಲ್ವಿನ್ ಉಳ್ಳಾಲದ ಮನೆಗೆ ಕಾರಿನಲ್ಲಿ ಕರೆದೊಯ್ದಿದ್ದ. ಬಳಿಕ ಆಕೆಯನ್ನು ಕುತ್ತಾರು ಸಮೀಪದ ಲಾಡ್ಜ್‌ಗೆ ಕರೆದುಕೊಂಡು ಹೋಗಿ ರೂಮ್ ಕೇಳಿದ್ದಾನೆ. ಆದರೆ ಅಪ್ರಾಪ್ತೆ ಆಗಿದ್ದ ಕಾರಣ ಲಾಡ್ಜ್ ಸಿಬ್ಬಂದಿ ರೂಮ್ ಕೊಟ್ಟಿರಲಿಲ್ಲ. ಸೋಮೇಶ್ವರ ಸಮುದ್ರ ತೀರಕ್ಕೆ ಕರೆದೊಯ್ದು ಕಾರೊಳಗೆ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಆಕೆಯನ್ನು ಮನೆಯವರೆಗೂ ಕಾರಿನಲ್ಲಿ ಬಿಟ್ಟುಹೋಗಿದ್ದಾನೆ. ಬೆಳಿಗ್ಗೆ ಮತ್ತು ಸಂಜೆ ಕಾರಿನಲ್ಲಿ ಬಾಲಕಿಯನ್ನು ಕರೆದೊಯ್ಯುವುದನ್ನು ಮನೆ ಸಮೀಪದವರು ಗಮನಿಸಿದ್ದರು. ರಾತ್ರಿ ಹೊತ್ತಲ್ಲಿ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ವೈದ್ಯರ ಬಳಿ ಕರೆದೊಯ್ದು ಪರಿಶೀಲಿಸಿದಾಗ ಅತ್ಯಾಚಾರ ನಡೆದಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಕೆಲ್ವಿನ್ ಪೇಂಟಿಂಗ್‌ ವೃತ್ತಿ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here