ಮಂಗಳೂರು : ತಡೆಗೋಡೆ ಮತ್ತು ರಸ್ತೆ ಕುಸಿತದಿಂದ ಅಪಾರ ಹಾನಿಯಾದ ಸ್ಥಳಕ್ಕೆ ವಿಧಾನ ಪರಿಷತ್‌ ಶಾಸಕರಾದ ಐವನ್‌ ಡಿʼಸೋಜಾ ಭೇಟಿ

0
17

ಶಕ್ತಿನಗರದಲ್ಲಿ ಕ್ಯಾಸ್ತಲಿನೊ ಕಾಲನಿಯಲ್ಲಿ ನಗರಪಾಲಿಕೆಯಿಂದ ನಿರ್ಮಿತಗೊಂಡಂತಹ ತಡೆಗೋಡೆ ಮತ್ತು ರಸ್ತೆ ಕುಸಿತದಿಂದ ಅಪಾರ ಹಾನಿಯಾಗಿದ್ದು, ಸ್ಥಳಕ್ಕೆ ವಿಧಾನ ಪರಿಷತ್‌ ಶಾಸಕರಾದ ಐವನ್‌ ಡಿʼಸೋಜಾ ಭೇಟಿ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಕ್ತಿನಗರ ಭಾಗದಲ್ಲಿ ನಗರ ಪಾಲಿಕೆಯು ನಿರ್ಮಾಣಗೊಂಡ ದೊಡ್ಡ ತಡೆಗೊಡೆಯೊಂದು ಅತೀಯಾದ ಮಳೆಗೆ ಕುಸಿತಗೊಂಡಿದ್ದು, ಮೂರು ನಾಲ್ಕು ಮನೆಗಳು ಅಪಾಯದ ಅಂಚಿನಲ್ಲಿದ್ದು, ಈ ಮನೆಗಳಿಗೆ ರಕ್ಷಣೆ ನೀಡಬೇಕು ಕೂಡಲೇ ತಡೆಗೋಡೆ ಕುಸಿತವನ್ನು ಸ್ಯಾಂಡ ಬ್ಯಾಗ್‌ ಅಳವಡಿಸಿ ತಡೆಗೋಡೆ ಕುಸಿತವನ್ನು ತಡೆಗಟ್ಟಲು ಮಹಾನಗರ ಪಾಲಿಕೆ ಆಯುಕ್ತರಿಗೆ
ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಳ್ಳಬೇಕೆಂದು ಐವನ್‌ ಡಿʼಸೋಜಾ ಒತ್ತಾಯಿಸಿದ್ದಾರೆ.

ಸರಕಾರದಿಂದ ನಿರ್ಮಣಗೊಂಡಂತಹ ತಡೆಗೋಡೆ ಮತ್ತು ಕಾಂಕ್ರೀಟ್‌ ರೋಡ್‌ ಹಾನಿಯಾಗಿದ್ದು, ಅಪಾಯದ ಅಂಚಿನಲ್ಲಿರುವ ನಾಲ್ಕು ಐದು ಮನೆಗಳಿಗೆ ನಗರ
ಪಾಲಿಕೆ ವತಿಯಿಂದ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಐವನ್‌ ಡಿʼಸೋಜಾರವರ ಜೊತೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಇಂಜಿನಿಯರ್‌ ಗಳಿಗೆ ಸೂಚಿಸಿದರು. ದೂರವಾಣಿ
ಮೂಲಕ ಜಿಲ್ಲಾಧಿಕಾರಿಗೆ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಐವನ್‌ ಡಿʼಸೋಜಾ ಒತ್ತಾಯಿಸಿದ್ದಾರೆ. ಈ ಸಂಧರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್‌ ಆದ ಕಿಶೋರ್‌ ಕೊಟ್ಟಾರಿ, ಸ್ಥಳೀಯ
ವಾರ್ಡ್‌ ಅಧ್ಯಕ್ಷರಾದ ಪ್ರಶಾಂತ್‌, ಮೀನಾ ಟೆಲ್ಲಿಸ್‌, ಹೇಮ, ಮಾರ್ಕೋ, ಶಮೀನಾ, ದಿನೇಶ್‌, ಶ್ವೇತಾ, ರಮೇಶ್‌, ಪ್ರೇಮಾ, ವತ್ಸಲಾ, ಶೋಭಾ, ಗ್ರೇಸ್‌ ರೋಡ್ರಿಗಸ್‌,ಮೆಟಿಲ್ಡಾ, ಎಡ್ವಿನ್‌, ನವೀನ್‌,ಶಲ್ಮಾ, ಮೀರಾ, ಪ್ಯಾರಿಸ್‌, ತನ್ನು ಸ್ಟ್ಯಾನ್ಲಿ, ಹಿಲ್ಡಾ ಮುಂತಾದವರು ಜೊತೆಗಿದ್ದರು.

LEAVE A REPLY

Please enter your comment!
Please enter your name here