ಮಂಗಳೂರು : ಮಲಬಾರ್ ಗೋಲ್ಡ್ ಮತ್ತು ರಂಗ ಸಂಗಾತಿ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಯಶಸ್ವಿ

0
14

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಂಗಳೂರು ಮತ್ತು ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಟಾನ ಮಂಗಳೂರು ಇದರ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ  ಮಂಗಳೂರು ಮೂಲದ ಅಗರಿ ರಾಘವೇಂದ್ರ ರಾವ್ ಮಾಲಕರು ಅಗರಿ ಎಂಟರ್ಪ್ರೈಸಸ್ ಮತ್ತು ಗೋಪಾಲಕೃಷ್ಣ ಶೆಟ್ಟಿ ಡೀನ್ ಕೆನರಾ ಪದವಿಪೂರ್ವ ಕಾಲೇಜು ಹಾಗೂ ಕರುಣಾಕರ ಬಲ್ಕೂರು ಮುಖ್ಯಸ್ಥರು ಕನ್ನಡ ವಿಭಾಗ ಎಕ್ಸ್ಪರ್ಟ್ ಕಾಲೇಜು ಮಂಗಳೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮೂವರು ರಂಗ ಸಾಧಕರಿಗೆ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ವಿದ್ಯುಷಿ ಸುಮಂಗಲ ರತ್ನಾಕರ್ ಭರತನಾಟ್ಯ ಗುರುಗಳು, ರೊ.ಸತೀಶ್ ಬೋಳಾರ್ ಕಲಾ ಪೋಷಕರು, ಕರುಣಾಕರ ಶೆಟ್ಟಿ ಕಲಾ ಸಂಘಟಕರು ಇವರನ್ನು ಮಲಬಾರ್ ವಿಶ್ವ ರಂಗ ಭೂಮಿ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಶಶಿರಾಜ್ ರಾವ್ ಕಾವೂರ್ ಸಂಚಾಲಕರು ರಂಗ ಸಂಗತಿ ಮಂಗಳೂರು ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಂಗಳೂರು ಸ್ಟೋರ್ ಹೆಡ್ ಹಫೀಜ್ ರಹ್ಮಾನ್, ಅಸಿಸ್ಟೆಂಟ್ ಸ್ಟೋರ್ ಹೆಡ್ ನಜರ್ ಅಹಮ್ಮದ್, ಬ್ರಾಂಚ್ ಮ್ಯಾನೇಜರ್ ರಘುರಾಮ್ ಸಿಎಸ್, ಮಾರ್ಕೆಟಿಂಗ್ ಮ್ಯಾನೇಜರ್ ಶೇಖ್ ಫರ್ಹಾನ್, ಸೇಲ್ಸ್ ಮೇನೇಜರ್ ಗಿರೀಶ್ ಶೆಟ್ಟಿ, ಸಮೀರ್ ಡೆಪ್ಯೂಟಿ ಸೇಲ್ಸ್ ಮ್ಯಾನೇಜರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here