ಮಣಿನಾಲ್ಕೂರು: ರಾಣಿ ಅಬ್ಬಕ್ಕ ಕುರಿತ ವಿಶೇಷ ಸರಣಿ ಉಪನ್ಯಾಸ ಕಾರ್ಯಕ್ರಮ

0
63

ಮಣಿನಾಲ್ಕೂರು: ತುಳುನಾಡ ರಾಣಿ ಅಬ್ಬಕ್ಕನ 500 ನೇ ವರ್ಷಾಚರಣೆ ಪ್ರಯುಕ್ತ ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಶಿಕ್ಷಕರ ಹಾಗೂ ಉಪನ್ಯಾಸಕರ ಸಂಘ ಮಂಗಳೂರು ವಿಭಾಗದ ವತಿಯಿಂದ ದಿನಾಂಕ 16.9. 2025ನೇ ಮಂಗಳವಾರ ಮಣಿನಾಲ್ಕೂರು ಸರಕಾರಿ ಪ.ಪೂ. ಕಾಲೇಜಿನಲ್ಲಿ ಅಬ್ಬಕ್ಕ ರಾಣಿಯ ಕುರಿತ ವಿಶೇಷ ಸರಣಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾಲೇಜಿನ ಪ್ರಾಂಶುಪಾಲರಾದ ಶಾಲಿನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪೂವಪ್ಪ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಆಯೋಜಕರಾದ ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಉಪನ್ಯಾಸಕಿ ಸಹನಾ ಮುಖ್ಯ ಅತಿಥಿಗಳಾಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕರೂ, ಸಾಹಿತಿ, ಸಂಶೋಧಕ, ಹಾಗೂ ಚಲನ ಚಿತ್ರ ನಿರ್ದೇಶಕರೂ ಆದ ಬಿ. ಎ.ಲೋಕಯ್ಯ ಶಿಶಿಲ ಅಬ್ಬಕ್ಕ ರಾಣಿಯ ಕುರಿತ ಹಲವು ಆಸಕ್ತಿದಾಯಕ, ರೋಚಕ ವಿಚಾರಗಳ ಉಪನ್ಯಾಸವನ್ನು ನೀಡಿದರು. ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿ ನಾಯಕ ಲಿಖಿತ್ ಧನ್ಯವಾದವಿತ್ತರು. ಬಳಿಕ ಅಬ್ಬಕ್ಕ ರಾಣಿಯ ಕುರಿತ ಸಾಕ್ಷ್ಯಪ್ರದರ್ಶನ ನಡೆಯಿತು.

LEAVE A REPLY

Please enter your comment!
Please enter your name here