ಮಣಿಪಾಲ ಸೇತುವೆ ಸಮಸ್ಯೆ ಗಂಭೀರ : ಕ್ರಮಕ್ಕೆ ಸತೀಶ್ ಪೂಜಾರಿ ಆಗ್ರಹ

0
14

ಉಡುಪಿ ಮಣಿಪಾಲದ ಪರಂಪಳ್ಳಿ ಕೊಳಲ ಗಿರಿ ಶಿಮ್ರಾ ಪರಂಪಳ್ಳಿ ಬ್ರಿಜ್ ಸೇತುವೆಯ ಮೇಲ್ಭಾಗದಲ್ಲಿ ಜಲ್ಲಿಯು ಎದ್ದು ಹೋಗಿ ಸೇತುವೆ ಮೇಲ್ಗಡೆಯ ಕಬ್ಬಿಣ ರೋಡು ಎದ್ದೇಳುವ ಸಂಭವವಿದ್ದು ಇದು ಸುಮಾರು ಬ್ರಿಜ್ ಆಗಿ ಹತ್ತು ವರ್ಷ ಆಗಿರುತ್ತದೆ.

ಇದು ಹತ್ತಾರು ಗ್ರಾಮಗಳನ್ನು ಸಂಪರ್ಕಿಸುವ ಮೂಲ ಸೇತುವೆಯಾಗಿರುತ್ತದೆ. ಕುಂದಾಪುರ ಬ್ರಹ್ಮಾವರ ಪೆರಡೂರು ಕೊಕ್ಕರ್ಣೆ ಈ ಪರಿಸರದ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಆಫೀಸ್ ಮತ್ತು ಮಣಿಪಾಲ ಕಸ್ತೂರಬಾ ಹಾಸ್ಪಿಟಲ್ ಇಲ್ಲಿ ಬಂದು ಹೋಗಲು ಈ ಮಣಿಪಾಲ ಪಪರಂಪಳ್ಳಿ ಸೇತುವೆ ಬಹಳ ಪ್ರಮುಖವಾಗಿರುತ್ತದೆ.

ಆದರೆ ವಿಪರ್ಯಾಸ ಸಂಗತಿ ಏನೆಂದರೆ. ಕೇವಲ ಹತ್ತು ವರ್ಷದಲ್ಲಿ ಈ ಬ್ರಿಜ್ ಪೂರ್ಣ ಪ್ರಮಾಣದಲ್ಲಿ ಹಾಳಾಗಿರುತ್ತದೆ. ಸೇತುವೆ ಮೇಲ್ಭಾಗದಲ್ಲಿ ಕಾಂಕ್ರೀಟ್ ಹಾಕಿದ ಜಲ್ಲಿ ಕಲ್ಲುಗಳು ಎದ್ದು ಹೊಂಡಗಳಾಗಿರುತ್ತದೆ. ಹಾಗೂ ಮಳೆ ಬಂದಾಗ ಈ ಸೇತುವೆ ಮೇಲೆ ನೀರು ನಿಂತು ಸರಗವಾಗಿ ನೀರು ಹೋಗಲು ಇಲ್ಲಿ ಯಾವುದೇ ಕಸಗಳ ರಾಶಿಯಿಂದ ಹೋಗಲು ಆಗದ ಕಾರಣ ಸಾರ್ವಜನಿಕರಿಗೆ ಬಹಳ ತೊಂದರೆ ಆಗಿದೆ ಮತ್ತು ಈ ಸೇತುವೆ ಕೆಳಭಾಗದಲ್ಲಿ ನದಿಯು ಬಹಳ ಸರಾಗವಾಗಿ ನೀರು ಹೋಗುತ್ತಿದ್ದು.

ಆದರೆ ಈಗ ಎರಡು ಮೂರು ವರ್ಷದಲ್ಲಿ ಸೇತುವೆಯ ಕೆಳಗಡೆ ಬಹಳ ಕಸವನ್ನು ರಾಶಿಯಾಗಿದ್ದು ವಾರಾಹಿ ಯೋಜನೆಯ ಕೆಲಸ ಮಾಡುವ ಸಮಯದಲ್ಲಿ ಮಣ್ಣನ್ನು ರಾಶಿ ಆಗಿಬಿಟ್ಟಿರುತ್ತಾರೆ ಸರಾಗವಾಗಿ ನೀರು ಹೋಗುತ್ತಿಲ್ಲ ಇದುಎರಡು ಸೇತುವೆಯ ಪಿಲ್ಲರ್ ಗೆ ಬಹಳ ಅಪಾಯಕಾರಿ .

ವಾರಾಹಿ ನೀರಿನ ಯೋಜನೆ ಬಳಸುವ ಪೈಪು ಮತ್ತು ಇತರ ಸಾಮಗ್ರಿಯು ಸೇತುವೆ ಕೆಳಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಕಸ ರಾಶಿಯಾಗಿ ಗೋಚರಿಸುತ್ತಿದೆ. ಇದು ಮಳೆಗಾಲದಲ್ಲಿ ಬಹಳ ಅಪಾಯಕಾರಿಯಾಗಿ ಪರಿಣಮಿಸುವುದು.

ಇದು ಸೇತುವೆಗೆ ಮತ್ತು ವಾರಾಹಿ ನೀರಿನ ಸೇತುವೆಗೆ ಬಹಳ ಅಪಾಯ ಕಟ್ಟಿಟ್ಟ ಬುತ್ತಿ ಮತ್ತು ವಾರಾಹಿನೀರಿನ ಸೇತುವೆ ಕೆಳಗಡೆ ಬ್ರಿಜ್ಜಿನ ಫಿಲ್ಲರಿಗೆ ಕಸಗಳ ರಾಶಿ ತುಂಬಿ ತುಳುಕುತ್ತಿದ್ದು.

ಈ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸುತ್ತಿರುವವರು ಸತೀಶ್ ಪೂಜಾರಿ ಕೀಳಂಜೆ ಸಾಮಾಜಿಕ ಕಾರ್ಯಕರ್ತರು.

LEAVE A REPLY

Please enter your comment!
Please enter your name here