ರೋಟರಿ ಕ್ಲಬ್ ಮಣಿಪಾಲ ಇವರು ಉಡುಪಿ ಬೋರ್ಡ್ ಹೈ ಸ್ಕೂಲ್ ಗೆ ಇತ್ತೀಚೆಗೆ ಕಾರ್ಯಕ್ರಮವನ್ನು ನಡೆಸಿ ಅನೇಕ ಕೊಡುಗೆಗಳನ್ನು ನೀಡಿರುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲ್ ರೋಟರಿ ಕ್ಲಬ್ಬಿನ ಅಧ್ಯಕ್ಷರಾಗಿರುವಂತಹ ರೋಟೆರಿಯನ್ ಶಶಿಕಲಾ ಇವರು ವಹಿಸಿದ್ದು, ಎಂಟನೇ ತರಗತಿಯ 50 ವಿದ್ಯಾರ್ಥಿಗಳಿಗೆ 250 -ರೂ ಇಂಗ್ಲಿಷ್ ಡಿಕ್ಷನರಿ ಹಾಗೂ 245-ರೂ ಅಟ್ಲಾಸ್ ನ್ನು ವಿತರಿಸಿ ಪುಸ್ತಕದ ಬಳಕೆಯ ಕ್ರಮವನ್ನು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ರೊಟೇರಿಯನ್ ಕರುಣಾಕರ ಶೆಟ್ಟಿ ಮಾತನಾಡಿ ಮಕ್ಕಳಿಗೆ ಪುಸ್ತಕದ ಮಹತ್ವವನ್ನು ಹಾಗೂ ಓದುವ ಹವ್ಯಾಸವನ್ನು ಹೇಗೆ ಬೆಳೆಸಿಕೊಳ್ಳಬೇಕು ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ವೇದಿಕೆಯಲ್ಲಿ ರೊಟೇರಿಯನ್ ರಾಜವರ್ಮ, ರೊಟೇರಿಯನ್ ಶ್ರೀಶ ಹೆಗ್ಡೆ ಹಾಗೂ.,.. ರೊಟೇರಿಯನ್ ಜೈ ವಿಠ್ಠಲ್ ಉಪಸ್ಥಿತರಿದ್ದರು, ಶ್ರೀಮತಿ ಲಕ್ಷ್ಮಿ ಹೆಗಡೆ ಸರ್ವರ ನ್ನು ಸ್ವಾಗತಿಸಿ . ಶ್ರೀಮತಿ ಬಿಂದಿಯಾ ವಂದಿಸಿ ಶ್ರೀಮತಿ ಯಶೋಧ ಕಾರ್ಯಕ್ರಮ ನಿರೂಪಿಸಿದರು.