ಮಂಜೇಶ್ವರ: ಪ್ರೇರಣಾ ಸಾರ್ವಜನಿಕ ಗ್ರಂಥಾಲಯ ಗುವೆದಪಡ್ಪು (ರಿ )2024-25 ನೇ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾಸರಗೋಡು ಜಿಲ್ಲಾ ಗ್ರಂಥಾಲಯ ಕೌನ್ಸಿಲರ್ ಸದಸ್ಯ ಮೀನಾಕ್ಷಿ ಬೊಡ್ಡೋಡಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಹಿತ ನುಡಿಗಳನ್ನು ಮಕ್ಕಳಿಗೆ ತಿಳಿಸಿದರು. ಜಯರಾಮ್ ಕೊಣಿಬೈಲು ಇವರು ಅಧ್ಯಕ್ಷತೆ ವಹಿಸಿದರು.9 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಹಾಗೂ ಚಂದ್ರಾ ದಿನಾಚರಣೆ ಸಂಬಂಧಿಸಿ Lp, Up, ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದು ಈ ಸ್ಪರ್ಧೆಯನ್ನು ಕಿಶೋರ್ ಮಾಸ್ಟರ್ ಆನೇಕಲ್, ಮತ್ತು ಗೋಪಾಲ ಮಾಸ್ಟರ್ ಇವರು ನೆರವೇರಿಸಿದರು.
ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ತನುಜಶ್ರೀ ಮತ್ತು ಸಿಂಚನ ಇವರು ಈ ಕಾರ್ಯಕ್ರಮವನ್ನು ಉದ್ದೇಶಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಚಂದ್ರಹಾಸ ಕತ್ತೆರಿಕೋಡಿ, ಅಭಿಷೇಕ್, ಚೈತ್ರ ಟೀಚರ್, ರುಬಿನ ಟೀಚರ್, ಹಾಗೂ ಗ್ರಂಥಾಲಯದ ಸದಸ್ಯರುಗಳು ಭಾಗಿಯಾಗಿದ್ದರು. ಅಶೋಕ್ ಕೊಡ್ಲಮೊಗರು ಗ್ರಂಥಾಲಯ ಕಾರ್ಯದರ್ಶಿ ನಿರೂಪಿಸಿದರು, ಜಯಶ್ರೀ ಗ್ರಂಥಾಲಯ ಸದಸ್ಯರು ವಂದಿಸಿದರು.
ವರದಿ: ತನುಜಶ್ರೀ ಗುವೇದಪಡ್ಪು