ಮಹಾನಗರ: ಮಾಣೂರು ಸುಬ್ರಾಯ ದೇವಸ್ಥಾನದಲ್ಲಿ ಕ್ಷೇತ್ರಾಭಿವೃದ್ಧಿ ಕಾರ್ಯ ಆರಂಭಗೊಂಡು ಫೆಬ್ರವರಿಯಲ್ಲಿ ವೈಭವದ ಬ್ರಹ್ಮಕಲಶೋತ್ಸವ ನಡೆಯಲಿದೆ. ಈ ಕಾರ್ಯಕ್ರಮ ಯಶಸ್ಸಿಗೆ ಎಲ್ಲರೂ ಕೈಜೋಡಿಸೋಣ ಎಂದು ಕ್ಷೇತ್ರದ ತಂತ್ರಿಗಳಾದ ವೇ। ಮೂ। ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಗಳು ಹೇಳಿದರು. ನೀರುಮಾರ್ಗ ಸಮೀಪದ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಬುಧವಾರ ನಡೆದ ಕಾರ್ತಿಕ ದೀಪೋತ್ಸವ ಮತ್ತು ಕ್ಷೇತ್ರಾಭಿವೃದ್ಧಿ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಶಶಿಧರ್ ಭಟ್ ಪ್ರಸ್ತಾವಿಸಿದರು.
ಶಾಸಕ ಡಾ| ಭರತ್ ಶೆಟ್ಟಿ ವೈ., ಕರಾವಳಿ ಕಾಲೇಜು ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಎಸ್. ಗಣೇಶ್ ರಾವ್, ಪ್ರಧಾನ ಅರ್ಚಕರಾದ ರಾಜೇಶ್ ಭಟ್ ಮಾಣೂರು, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ಶಶಿಪ್ರಭಾ ಪದ್ಮನಾಭ ಕೋಟ್ಯಾನ್, ಕೋರೆಟ್ಟುಗುತ್ತು ಕುಂಞ್ಞಣ್ಣ ಶೆಟ್ಟಿ ಕೋರೆಟ್ಟುಗುತ್ತು, ಎನ್.ಎಸ್. ಭಟ್, ಗುತ್ತಿಗೆದಾರ ಮಂಜುನಾಥ್, ದೇವಳ ವ್ಯವಸ್ಥಾಪನಾ ಮಾಣೂರು ಸಮಿತಿ ಸದಸ್ಯರಾದ ಭಾಸ್ಕಜೆ ಮಾಣೂರು, ಮುರಳೀಧರ ಕರ್ಕೇರ, ಉಮಾನಾಥ ಸುವರ್ಣ ನೀರುಮಾರ್ಗ, ರಾಧಾಕೃಷ್ಣ ರಾಮರಬೈಲು, ಕೃಷ್ಣ ನಾಯ್ಕ ಕುಟ್ಟಿಕಲ, ಮೋಹಿನಿ ಮೋನಪ್ಪ ನೀರುಮಾರ್ಗ, ಧನವಂತಿ ವೇಣುಗೋಪಾಲ ಸರಿಪಲ್ಲ ರಮೇಶ್ ಆಚಾರ್ಯ ನೀರುಮಾರ್ಗ ಉಪಸ್ಥಿತರಿದ್ದರು.
