ಉಡುಪಿ: ಉಡುಪಿ ಶ್ರೀ ಕೃಷ್ಣಮಠದ ಒಳಾಂಗಣದಲ್ಲಿಯೇ ಶ್ರೀ ಕೃಷ್ಣನಿಗೆ ರಥೋತ್ಸವ ನಡೆಸಲು ಅನುಕೂಲವಾಗುವಂತೆ ಪುಟ್ಟ ಸುವರ್ಣ ರಥ ಸಮರ್ಪಿಸಲು ಪರ್ಯಾಯ ಮಠಾಧೀಶರಾದ ಪರಮ ಪೂಜ್ಯ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥರ ಸಂಕಲ್ಪಕ್ಕೆ ಶ್ರೀ ಕೃಷ್ಣ ಮುಖ್ಯ ಪ್ರಾಣರ ಪ್ರಾರ್ಥನೆಯೊಂದಿಗೆ ಶ್ರೀ ಶ್ರೀ ಸುಶ್ರೀಂದ್ರ ತೀರ್ಥರ ಉಪಸ್ಥಿತಿಯಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ಚಾಲನೆ ನೀದಿದರು.
ಮಂತ್ರಾಲಯ ಶ್ರೀಪಾದರು ಚಂದ್ರ ಶಾಲೆಯಲ್ಲಿ ಸಂಸ್ಥಾನ ಪೂಜೆ ನೆರವೇರಿಸಿದರು ಹಾಗೂ ಶ್ರೀ ಕೃಷ್ಣ ಪೂಜೆಯ ದರ್ಶನದ ಬಳಿಕ ರಾಜಾಂಗಣದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡರು.
ಪಾರ್ಥಸಾರಥಿ ಸುವರ್ಣ ರಥಕ್ಕೆ ಶ್ರೀ ಕೃಷ್ಣನಿಗೆ ರಾಯರ ಸೇವಾ ರೂಪವಾಗಿ 10 ಲಕ್ಷ ರೂಪಾಯಿ ನೀಡಿದ ಮಂತ್ರಾಲಯ ಶ್ರೀಪಾದರು. ಇದಕ್ಕೂ ಮುನ್ನ ಮಂತ್ರಾಲಯ ಶ್ರೀ ಪಾದರು ಶ್ರೀ ಕೃಷ್ಣ ದೇವರಿಗೆ ಸುವರ್ಣ ಹಾರ ಸಮರ್ಪಿಸಿದರು. ಪರ್ಯಾಯ ಪುತ್ತಿಗೆ ಉಭಯ ಶ್ರೀಪಾದರು ಶ್ರೀ ರಾಮದೇವರಿಗೆ ಸುವರ್ಣ ಹಾರ ಅರ್ಪಿಸಿದರು. ಮಂತ್ರಾಲಯ ಶ್ರೀ ರಾಘವೇಂದ್ರ ಮಠಾಧೀಶರಾದ ಶ್ರೀ ಸುಬುದೇ0ದ್ರ ತೀರ್ಥ ಶ್ರೀ ಪಾದರಿಗೆ ಅಭಿನವ ಪರಿಮಳಾಚಾರ್ಯ ಉಪಾಧಿ ನೀಡಿ ಅನೇಕ ವಿದ್ವಾಂಸರ ಮತ್ತು ಗಣ್ಯ ನಾಗರಿಕರ ಸಮುಪಸ್ತಿತಿಯಲ್ಲಿ ಸನ್ಮಾನಿಸಿದರು.
ಶ್ರೀ ಮಠದಿಂದ ಸಕಲ ಗೌರವಾದರಗಳನ್ನು ನೀಡಿ ಪೂಜ್ಯ ಮಂತ್ರಾಲಯ ಶ್ರೀಪಾದರನ್ನು ಸತ್ಕರಿಸಲಾಯಿತು.