ದಿನಾಂಕ 22.03.2026 ಭಾನುವಾರದಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಮಂತ್ರಾಲಯದ ಯತಿಗಳಾದ ಶ್ರೀ ಶ್ರೀ ಸುಬುಧೇಂದ್ರ ಶ್ರೀಪಾದರು ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಶ್ರೀಪಾದರನ್ನು ದೇವಸ್ಥಾನದ ವತಿಯಿಂದ ಪೂರ್ಣಕುಂಭ ಹಾಗೂ ವಾದ್ಯಗೋಷ್ಠಿಗಳೊಂದಿಗೆ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು.
ಶ್ರೀಪಾದರಿಗೆ ಪರ್ಯಾಯ ಅರ್ಚಕರಾದ ಕೆ. ವ್ಯಾಸ ಉಪಾಧ್ಯಾಯರು ಶ್ರೀ ದೇವರ ಪ್ರಸಾದವನ್ನು ಸಮರ್ಪಿಸಿದರು. ಆಡಳಿತ ಧರ್ಮದರ್ಶಿಗಳಾದ ಕೆ. ಶ್ರೀ ರಮಣ ಉಪಾಧ್ಯಾಯರು ಶ್ರೀಗಳಿಗೆ ಮಾಲಿಕೆ ಮಂಗಳಾರತಿ ನೆರವೇರಿಸಿ ಪಾದಕಾಣಿಕೆಯನ್ನು ಸಲ್ಲಿಸಿ ಗೌರವಿಸಿದರು.
ಶ್ರೀಗಳು ನೆರೆದಿದ್ದ ಭಕ್ತಾದಿಗಳಿಗೆ ಶ್ರೀ ಕ್ಷೇತ್ರದ ಪೌರಾಣಿಕ ಹಿನ್ನಲೆ ಕುರಿತು ವಿಶೇಷ ಪ್ರವಚನ ನೀಡಿ, ಕ್ಷೇತ್ರದ ಸ್ವಚ್ಛತೆ ಹಾಗೂ ಸತ್ಕಾರವನ್ನು ಪ್ರಶಂಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಮಂತ್ರಾಲಯ ಮಠದ ವಿದ್ವಾಂಸರು, ವಿಶ್ರಾಂತ ಆಡಳಿತ ಧರ್ಮದರ್ಶಿಗಳಾದ ಕೆ. ಸೂರ್ಯನಾರಾಯಣ ಉಪಾಧ್ಯಾಯರು, ಅರ್ಚಕ ಮಂಡಳಿಯ ಸರ್ವ ಸದಸ್ಯರು ಹಾಗೂ ದೇವಸ್ಥಾನದ ಸಿಬ್ಬಂದಿಗಳು ಉಪಸ್ಥಿತರಿದ್ದರು.
Home Uncategorized ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಮಂತ್ರಾಲಯದ ಯತಿಗಳಾದ ಶ್ರೀ ಶ್ರೀ ಸುಬುಧೇಂದ್ರ ಶ್ರೀಪಾದರು ಭೇಟಿ

