ಬಾಕುಡ ಸಮಾಜದ 18 ದೈವಸ್ಥಾನದಲ್ಲಿ ಒಂದಾದ ಬಡಾಜೆ ಕಂಚಾರ್ದ್ ನ ಕುಟುಂಬಸ್ಥರ ಶ್ರೀ ಕೋಮರಾಯ, ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನ ಬಜಿಲೇರಿಯ,ಮಂಜೇಶ್ವರ ಇಲ್ಲಿ ದೈವಗಳ ನೆಮೋತ್ಸವವು 2026 ರ ಮಾರ್ಚ್ 21, 22 ರಂದು ಜರಗಲಿದೆ.
ತಾರೀಕು 21 ಶನಿವಾರದಂದು ಬೆಳಗ್ಗೆ ಬಡಾಜೆ ಬೂಡು ಶ್ರೀ ಶ್ರೀ ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಶುದ್ದಿ ಕಲಶ, ಗಣಹೋಮ ಜರಗಿ ಸಂಜೆ 4 ರಿಂದ ಸ್ಥಳ ಗುಳಿಗ, ಸುಬ್ಬಿ ಗುಳಿಗ ದೈವಗಳ ನೇಮ
ಸಂಜೆ 6 ಗಂಟೆಗೆ ದೈವಗಳ ಭಂಡಾರ ಏರಿ, ಅನ್ನದಾನ ರಾತ್ರಿ 8 ಗಂಟೆಯಿಂದ ಶ್ರೀ ಉಲ್ಲಾಲ್ತಿ, ಶ್ರೀ ಬಿಲ್ಲಾರ, ಶ್ರೀ ಅಣ್ಣಪ್ಪ ಪಂಜುರ್ಲಿ, ತಾರೀಕು 22 ಆದಿತ್ಯವಾರ ರಾತ್ರಿ 12 ಗಂಟೆಯಿಂದ ಶ್ರೀ ಕುಂಜತ್ತೂರ್ ಮರ್ಲ್ ಜುಮಾದಿ, ಶ್ರೀ ಪಿಲಿಚಾಮುಂಡಿ, ಪ್ರಾತ:ಕಾಲ 6 ರಿಂದ ಶ್ರೀ ಬಬ್ಬರ್ಯ, ಶ್ರೀ ಕೋಮರಾಯ ದೈವಗಳ ನೇಮ , ನಂತರ ದೈವದ ಗಂಧಮುಡಿ ಪ್ರಸಾದ ಸ್ವೀಕಾರ ನಡೆಯಲಿದೆ ಎಂದು ಪ್ರಕಟಣೆಯೊಂದರಲ್ಲಿ ಕುಟುಂಬ ಸದಸ್ಯ ಶ್ರೀ ಉದಯಮಲ್ಲಿ, ಅಮ್ಮ್ಚಿ ಕೆರೆ, ಬೆದ್ರಡ್ಕ, ಇವರು ತಿಳಿಸಿದ್ದಾರೆ . ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ದೈವಗಳ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು, ದೈವಸ್ಥಾನದ ಗುರುಹಿರಿಯರು, ಆಡಳಿತ ಕಮಿಟಿ, ಹಾಗೂ ಕುಟುಂಬಸ್ಥರು ವಿನಂತಿದ್ದಾರೆ.
ವರದಿ: ಉದಯ ಮಲ್ಲಿ

