ಮಾ.3: ಚಂದ್ರಗ್ರಹಣ ಪ್ರಯುಕ್ತ ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯದಲ್ಲಿ ವ್ಯತ್ಯಯ

0
20

ಉಜಿರೆ: ಮಾರ್ಚ್ ಮೂರರಂದು ಮಂಗಳವಾರ ಅಪರಾಹ್ನ ಗಂಟೆ 3.19 ರಿಂದ ಸಂಜೆ ಗಂಟೆ 6.48ರ ವರೆಗೆ ಚಂದ್ರಗ್ರಹಣ ಇರುವುದರಿಂದ ಮಂಗಳವಾರ ಮಧ್ಯಾಹ್ನ ಒಂದೂವರೆ ಗಂಟೆ ವರೆಗೆ ಮಾತ್ರ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ಅವಕಾಶವಿದೆ ಎಂದು ದೇವಸ್ಥಾನದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾತ್ರಿ ಗಂಟೆ 7.30ರ ನಂತರ ಚಂದ್ರಗ್ರಹಣ ಮುಕ್ತಾಯವಾದ ಬಳಿಕ ದೇವಸ್ಥಾನದ ಶುದ್ಧೀಕರಣ ಹಾಗೂ ಇತರ ಧಾರ್ಮಿಕ ವಿಧಿ-ವಿಧಾನಗಳು ಮುಗಿದ ನಂತರ ದೇವರ ದರ್ಶನಕ್ಕೆ ಅವಕಾಶವಿದೆ.
ದೂರದ ಊರುಗಳಿಂದ ಬರುವ ಭಕ್ತರು ದೇವರ ದರ್ಶನದ ಸಮಯ ವ್ಯತ್ಯಯವನ್ನು ಗಮನಿಸಿ ಸಹಕರಿಸುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಮೊಬೈಲ್ 9945725511

LEAVE A REPLY

Please enter your comment!
Please enter your name here