ಪ್ರತಿ ಗ್ರಾಮ ಪಂಚಾಯತ್ ಬಳಿ ಬಿಜೆಪಿಯು ಮಾರ್ಚ್ 14 ರಂದು ಹೋರಾಟ ಹಮ್ಮಿ ಕೊಳ್ಳಲಿದೆ. ರಾಜ್ಯ ಸರಕಾರದ ವೈಫಲ್ಯಗಳ ಬಗ್ಗೆ, ಬೆಲೆ ಏರಿಕೆಯಿಂದ ಜನರ ಪರಿಸ್ಥಿತಿ ಸಂಕಷ್ಟಕ್ಕೆ ಒಳಗಾಗಿದೆ. ಈ ಸಂಕಷ್ಟವನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಜನಾಗ್ರಹ ಸಭೆಯನ್ನು ಮಾಡಲಾಗುವುದುಎಂದು ಬಿಜೆಪಿ ಮಾಧ್ಯಮ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದೆ .
ಕೆಂಪು ಕಲ್ಲು, ಮರಳು ಸಾಗಾಟಕ್ಕೆ ಸರಿಯಾದ ನೀತಿ ಇಲ್ಲದೆ ವ್ಯತ್ಯಯ, ಅಕ್ರಮ ಸಕ್ರಮ ಅರ್ಜಿಗಳ ತಿರಸ್ಕಾರ, ಆಶ್ರಯ ಮನೆ ಮಂಜೂರಾತಿ ಇಲ್ಲ, ಲೋಡ್ ಶೆಡ್ಡಿಂಗ್, ಬಜೆಟ್ ನಲ್ಲಿ ಕರಾವಳಿ ನಿರ್ಲಕ್ಷ್ಯ, ಮುಸ್ಲಿಂ ಓಲೈಕೆ, ಸುಳ್ಳು ಕೇಸು ದಾಖಲು
ಮನೆ ಕಟ್ಟ ಬೇಕಾದರೆ ನಮೂನೆ 9 ಹಾಗೂ 11 ಎಯನ್ನು ಕೊಡುವ ಪ್ರಕ್ರಿಯೆ ಆಗುತ್ತಿದೆ. ಯಾರಿಗೂ ಸಾಲ ಪಡೆಯಲು ಆಗುತ್ತಿಲ್ಲ. ಕಳೆದ 2ಮುಕ್ಕಾಲು ಅವಧಿಯಲ್ಲಿ ಅನುದಾನ ಬರಲೇ ಇಲ್ಲ. ಅನುದಾನ ಬಾರದೆ ಶಂಕು ಸ್ಥಾಪನೆ ಮಾಡುವುದು ಹೇಗೆ ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಎತ್ತುತ್ತಿದೆ.
ಪ್ರತಿ ವರ್ಷ ಸರಕಾರ ನೀಡುವ ಶಾಸಕರ ನಿಧಿಯಿಂದ ಈ ಅನುದಾನ ನೀಡಲಾಗುತ್ತಿದೆ. ಇದರಿಂದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಆಗುತ್ತಿದೆ. ಲಕ್ಷಾಂತರ ಸಾಲದ ಮೊರೆ ಹೋಗಿರುವ ಸರಕಾರದಿಂದ ಯಾವುದೇ ಸವಲತ್ತುಗಳನ್ನು ಪಡೆಯಲು ಆಗುತ್ತಿಲ್ಲ.
ಬಿಪಿಎಲ್ ಕಾರ್ಡ್ ರದ್ಧತಿ ಮಾಡುವ ಮೂಲಕ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ. ಕಟ್ಟಡ ನಿರ್ಮಾಣ ಕಾರ್ಯ ಆಗುತ್ತಿಲ್ಲ. ಇದರಿಂದ ಜನ ಆತಂಕಕ್ಕೆ ಒಳಗಾಗಿದೆ.
ರಾಜ್ಯ ಸರಕಾರ ತಪ್ಪು ದಾರಿಗೆ ಹೋಗುತ್ತಿದೆ. ಅದರ ತಪ್ಪುಗಳನ್ನು ಸಮಾಜಕ್ಕೆ ತೋರಿಸುವ ಕಾರ್ಯ ಆಗಬೇಕು ಎಂದರು .
ಕಾರ್ಕಳ ಬಿಜೆಪಿ ಅಧ್ಯಕ್ಷ ನವೀನ್ ನಾಯಕ್, ವಕ್ತಾರ ರವೀಂದ್ರ ಮೊಯ್ಲಿ, ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಬೋಳ, ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಮಾಧ್ಯಮ ಗೋಷ್ಠಿಯಲ್ಲಿದ್ದರು.

