ಹೆಬ್ರಿ : ಹೆಬ್ರಿಯ ಬೇಳಂಜೆ ಗ್ರಾಮದ ತುಂಬೆಜಡ್ಡು ಬಳಿ ಗಾಂಜಾ ಮಾರಾಟ ಹಾಗೂ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಖಚಿತ ಮಾಹಿತಿ ಹಿನ್ನಲೆಯಲ್ಲಿ
ಹೆಬ್ರಿ ಪೊಲೀಸ್ ಠಾಣೆ ಪೊಲೀಸ್ ಕ್ರೈಂ ಸಬ್ ಇನ್ಸ್ ಫೆಕ್ಟರ್ ಅಶೋಕ್ ಮಾಳಭಾಗಿ ಸಿಬ್ಬಂದ್ಧಿಗಳ ಸಹಾಯದಿಂದ ಮುಂಜಾನೆ ದಾಳಿ ನಡೆಸಿ ತೇಜಸ್, ಪ್ರಜ್ವಲ್,ಪ್ರವೀಣ್ ಅವರನ್ನು ಬಂಧಿಸಿರುವ ಘಟನೆ ನಡೆದಿದೆ. ಸ್ಥಳದಲ್ಲಿದ್ದ ರೂಪಾಯಿ 89 ಸಾವಿರ ನಗದು, 08 ಮೊಬೈಲ್ ಪೋನ್‌ಗಳು, 07 ಎಟಿಎಂ ಕಾರ್ಡಗಳು, 03 ಸಿಮ್ ಕಾರ್ಡಗಳು, 2 ನೋಟ್ ಪುಸ್ತಕಗಳು ಮತ್ತು 21 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಹೆಬ್ರಿ ಠಾಣೆಯಲ್ಲಿ ಕೇಸು ದಾಖಲಾಗಿದೆ.