ಶ್ರೀ ಶಾರದಾಂಬಿಕಾ ಭಜನಾ ಮಂದಿರ ಶಾರದಾ ನಗರ ಸಜೀಪ ಮುನ್ನೂರು ಕ್ಷೇತ್ರದಲ್ಲಿ ವಾಗ್ದೋಷ ನಿವಾರಣೆಗಾಗಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ವಾಗ್ದೇವಿ ಪೂಜೆ ವಿಶೇಷ ಭಜನೆ ಅನ್ನದಾನ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯಿಂದ ಜರಗಿತು.
ಸಮಿತಿಯ ಅಧ್ಯಕ್ಷ ಸತೀಶ ಗಟ್ಟಿ ,ಪದಾಧಿಕಾರಿಗಳಾದ ತನಿಯಪ್ಪ ಪೂಜಾರಿ, ಯೋಗೀಶ, ಪರಮೇಶ್ವರ, ಪುರಂದರ, ತಿಮ್ಮಪ್ಪ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

