ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಳಿಕೆ ವಲಯದ ನಿರ್ಕಜೆ ಒಕ್ಕೂಟ ಮತ್ತು ಶ್ರೀದುರ್ಗಾ ಮಹಿಳಾ ಮಂಡಲದಿಂದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

0
1

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್,( ರಿ )ವಿಟ್ಲ ಪ್ರಗತಿ ಬಂಧು ಸ್ವಸಹಾಯ ಸಂಘ ಅಳಿಕೆ ವಲಯದ ನಿರ್ಕಜೆ ಒಕ್ಕೂಟ ಹಾಗೂ ಶ್ರೀ ದುರ್ಗಾ ಮಹಿಳಾ ಮಂಡಲ ನಿರ್ಕಜೆ, ಕೇಪು ಬಂಟ್ವಾಳ ಇವರ ಜಂಟಿ ಆಶ್ರಯದಲ್ಲಿ 3 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ವೇದಮೂರ್ತಿ ಶ್ರೀ ದಿನೇಶ್ ಮರಡಿತ್ತಾಯ ಗುಮ್ಮಾಟಗದ್ದೆ ಇವರ ನೇತೃತ್ವದಲ್ಲಿ ಶ್ರಿ ಕೈಲಾಸೇಶ್ವರ ದೇವ ಸನ್ನಿಧಿ ಸಭಾಂಗಣದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ವಿಟ್ಲ ತಾಲೂಕಿನ ಯೋಜನಾಧಿಕಾರಿ ಸುರೇಶ್ ಗೌಡರವರು ನಮ್ಮ ಮಕ್ಕಳಲ್ಲಿ ಸಂಸ್ಕಾರ ಹಾಗೂ ಧರ್ಮ ಜಾಗೃತಿ ಬೆಳಸಬೇಕು ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದ ವಿಸ್ತಾರವಾದ ಮಾಹಿತಿ ನೀಡಿ ಶುಭ ಹಾರೈಸಿದರು.

ಕೇಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ತಾರಾನಾಥರವರು ಗಾಮಗಳಲ್ಲಿ ಯೋಜನೆಯ ಕಾರ್ಯಕ್ರಮಗಳಿದ ಆದ ಅಭಿವೃದ್ಧಿ ಗಳನ್ನು ಸ್ಮರಿಸಿದರು.ಅಳಿಕೆ ವಲಯದ ವಲಯಧ್ಯಕ್ಷರಾದ ರಾಜೇಂದ್ರ ರೈ ರವರು ವಲಯದಲ್ಲಿ ಒಕ್ಕೂಟ ಪದಾಧಿಕಾರಿಯಾಗಿರುವುದಕ್ಕೆ ಬಹಳ ಹೆಮ್ಮೆ ಇದೆ ಎಂದರು. ಕೇಪು ಪಂಚಾಯತ್ ಅಧ್ಯಕ್ಷರು ಹಾಗೂ ಕಾರ್ಯಕ್ರಮದ ಅಧ್ಯಕ್ಷರಾದ ರಾಘವ ಮಣಿಯಾಣಿ ಕ್ಷೇತ್ರದ ಕುರಿತ ಅಪಪ್ರಚಾರಕ್ಕೆ ಕಿವಿಯಾಗದೆ ಕ್ಷೇತ್ರ ಹಾಗೂ ಯೋಜನೆಯ ಮೂಲಕ ನಡೆದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ತಿಳಿಯಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ನಿರ್ಕಜೆ ಒಕ್ಕೂಟ ಅಧ್ಯಕ್ಷರಾದ ಭವ್ಯ ಹಾಗೂ ಶ್ರೀ ದುರ್ಗಾ ಮಹಿಳಾ ಮಂಡಲ ಅಧ್ಯಕ್ಷರಾದ ಭಾರತಿ ಉಪಸ್ಥಿತರಿದ್ದರು. ಮಹಿಳಾ ಮಂಡಲದ ವರದಿಯನ್ನು ಪ್ರೇಮಲತಾ ನಾರಾಯಣ ವಾಚಿಸಿದರು, ಕಾರ್ಯಕ್ರಮದ ನಿರೂಪಣೆ ಕಾವ್ಯ ಸೇವಾಪ್ರತಿನಿಧಿ, ಸ್ವಾಗತ ಪೂರ್ಣಿಮಾ ಸೇವಾಪ್ರತಿನಿಧಿ, ಧನ್ಯವಾದ ಮಹಿಳಾ ಮಂಡಲದ ಸದಸ್ಯೆ ಹೇಮಲತಾ ನೀಡಿದರು. ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿ ಸರಸ್ವತಿ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಪುಟ್ಟಣ್ಣ, ಚಂದ್ರಶೇಖರ, ನಿರ್ಕಜೆ ಒಕ್ಕೂಟ ಸದಸ್ಯರು, ಶ್ರೀ ದುರ್ಗಾ ಮಹಿಳಾ ಮಂಡಲ ಸದಸ್ಯರು, ಕೈಲಾಸೇಶ್ವರ ಭಜನಾ ಮಂಡಳಿ ಪದಾಧಿಕಾರಿಗಳು ಆದರ್ಶ ಯುವಕ ಮಂಡಲ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here