ಬಪ್ಪನಾಡು/ ನಿಟ್ಟೆ:: ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಲಯನ್ಸ್ ಕ್ಲಬ್ ಹಿರಿಯಡ್ಕ ರೋಟರಿ ಕ್ಲಬ್ ನಿಟ್ಟೆ, ನಿಟ್ಟೆ ತಾಂತ್ರಿಕ ಕಾಲೇಜಿನ ಎನ್.ಎಸ್.ಎಸ್ , ರೆಡ್ ಕ್ರಾಸ್ ನಿಟ್ಟೆ, ಎನ್ ಸಿ ಸಿ ನಿಟ್ಟೆ, ಹಾಗೂ ವಿವಿಧ ಸಂಘ ಸಂಸ್ಥೆಗಳ ಸಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆ ನಿಟ್ಟೆ, ಗಾಜ್ರಿಯ ಆಸ್ಪತ್ರೆ ನಿಟ್ಟೆ, ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜ್ ದೇರಳಕಟ್ಟೆ, ಇವುಗಳ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಜರಗಿತು. 475 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲೆ 317ಸಿ ಯ ಜಿಲ್ಲಾ ದ್ವಿತೀಯ ಉಪರಾಜ್ಯಪಾಲರಾದ ಲಯನ್ ಹರಿಪ್ರಸಾದ್ ರೈ ಉದ್ಘಾಟಿಸಿದರು. ಹಾಗೂ ಉಭಯ ಜಿಲ್ಲೆಗಳಲ್ಲಿ ರಕ್ತದ ಕೊರತೆ ಅಧಿಕವಾಗಿದ್ದು ಯುವ ಜನತೆ ರಕ್ತದಾನ ಮಾಡಿ ರೋಗಿಗಳ ಪ್ರಾಣ ಉಳಿಸುವ ಕಾರ್ಯದಲ್ಲಿ ಕೈಜೋಡಿಸುತ್ತಿರುವುದು ನಿಜಕ್ಕೂ ಅಭಿನಂದನಿಯ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಕಳೆದ ಮೂರು ವರ್ಷಗಳಿಂದ ದೊಂದಿಗೆ ರಕ್ತದಾನ ಶಿಬಿರಗಳು ಹಾಗೂ ಇತರ ಕಾರ್ಯಕ್ರಮಗಳನ್ನು ಲಯನ್ಸ್ ಕ್ಲಬ್ ಹಿರಿಯಡ್ಕ ದೊಂದಿಗೆ ಜಂಟಿಯಾಗಿ ಆಯೋಜಿಸುತ್ತಿರುವುದು ಮಾತ್ರವಲ್ಲದೆ ಜಿಲ್ಲೆ 317 ಸಿ ಅನೇಕ ಕ್ಲಬ್ಬಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ ಎಂದರು. ತರುವಾಯ ಮಾತನಾಡಿದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾಕ್ಟರ್ ಏನ್ ನಿರಂಜನ್ ಚಿಪ್ಲಂಕರ್ ಪ್ರಸ್ತುತ ಕಾಲದಲ್ಲಿ ರಕ್ತದಾನಕ್ಕೆ ಯುವ ಜನತೆ ಹಿಂದೇಟು ಹಾಕುತ್ತಿರುವುದು ನಿಜಕ್ಕೂಖೇಧನೀಯ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಈವರೆಗೆ ವರ್ಷಕ್ಕೆ ಒಂದು ಬಾರಿ ರಕ್ತದಾನದ ಕಾರ್ಯಕ್ರಮ ಮಾಡುತ್ತಿದ್ದು ಈ ಬಾರಿಯಿಂದ ಕನಿಷ್ಠಪಕ್ಷ ಎರಡು ಬಾರಿಯಾದರೂ ರಕ್ತದಾನ ಮಾಡಿ ಯುವಜನತೆಯಲ್ಲಿ ಸೇವಾಮನ ಭಾವನೆಯನ್ನು ಮೂಡಿಸುವಲ್ಲಿ ಖಂಡಿತ ನಾವು ಶ್ರಮಿಸುವುದಾಗಿ ಹೇಳಿದರು ,ಲಯನ್ಸ್ ಜಿಲ್ಲೆ 317ಡಿ ಜಿಲ್ಲಾ ರಕ್ತದಾನ ಸಹಯೋಜಕರಾದ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನ ನಿಕಟಪೂರ್ವ ಅಧ್ಯಕ್ಷರಾದ ಬಿ ಶಿವಪ್ರಸಾದ್, ಅಧ್ಯಕ್ಷರಾದ ಅನಿಲ್ ಕುಮಾರ್, ಪ್ರಣವ್ ಶರ್ಮ, ಡಾಕ್ಟರ್ ಜನಾರ್ಧನ್ ನಾಯಕ್, ಡಾಕ್ಟರ್ ಶಿವಪ್ರಸಾದ್ ಶೆಟ್ಟಿ ನಿಟ್ಟೆ ರೋಟರಿ ಕ್ಲಬ್ ಅಧ್ಯಕ್ಷರಾದ ಸತೀಶ್ ಕುಮಾರ್ ಹಿರಿಯಡ್ಕ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸುಧೀರ್ ಹೆಗಡೆ ಮೊದಲ ದವರು ಉಪಸ್ಥಿತರಿದ್ದರು