ಪಡ್ಡಂದಡ್ಕದಲ್ಲಿ ಜು. 27ರಂದು ಬೃಹತ್ ಉಚಿತ ವೈದ್ಯಕೀಯ-ರಕ್ತದಾನ ಶಿಬಿರ

0
28

ವೇಣೂರು: ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ, ಮಂಗಳೂರು, ಇಂಡಿಯನ್ ಕ್ಯಾನ್ಸ‌ರ್ ಸೊಸೈಟಿ, ಮಂಗಳೂರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಬಿ.ಸಿ. ಟ್ರಸ್ಟ್ ವೇಣೂರು ವಲಯ ಕರಿಮಣೇಲು, ಹೊಸಂಗಡಿ, ಬಡಕೋಡಿ ಒಕ್ಕೂಟಗಳು, ಪೆರಾಡಿ ಮತ್ತು ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಹಾಲು ಉತ್ಪಾದಕರ ಸಹಕಾರಿ ಸಂಘ ಗಾಂಧಿನಗರ ಮತ್ತು ಪೆರಿಂಜೆ, ಕ್ರಿಸ್ತರಾಜ ದೇವಾಲಯ, ಭಾರತೀಯ ಕೆಥೊಲಿಕ್ ಯುವ ಸಂಚಲನ (ICYM) ವೇಣೂರು ಘಟಕ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ.) ಮಂಗಳೂರು, ದ.ಕ. ಜಿಲ್ಲಾ ಕುಡಾಳ್ ದೇಶಸ್ಥ ಆಧ್ಯ ಗೌಡ್ ಬ್ರಾಹ್ಮಣ ಸಂಘ (ರಿ.), ಬಂಟರ ಗ್ರಾಮ ಸಮಿತಿ, ಹೊಸಂಗಡಿ ಬಡಕೋಡಿ, ಜನಸೇವಾ ಟ್ರಸ್ಟ್ ಪಡ್ಡಂದಡ್ಕ (ರಿ.) ಹಾಗೂ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ (ರಿ.) ಪಡ್ಡಂದಡ್ಕ ಇವುಗಳ ಜಂಟಿ ಆಶ್ರಯದಲ್ಲಿ ಬೃಹತ್ ಉಚಿತ ವೈದ್ಯಕೀಯ, ಹೃದಯ ರೋಗ, ಕ್ಯಾನ್ಸ‌ರ್ ತಪಾಸಣೆ ಹಾಗೂ ರಕ್ತದಾನ ಶಿಬಿರ 27-07-2025ನೇ ಆದಿತ್ಯವಾರದಂದು ಸಮುದಾಯ ಭವನ, ಪಡ್ಡಂದಡ್ಕ ಇಲ್ಲಿ ಬೆಳಿಗ್ಗೆ ಗಂಟೆ 9.00ರಿಂದ ಮಧ್ಯಾಹ್ನ ಗಂಟೆ 1.00ರವರೆಗೆ (ನೋಂದಣಿ ಮಧ್ಯಾಹ್ನ ಗಂಟೆ 12.30ರ ವರೆಗೆ ಮಾತ್ರ) ಜರಗಲಿದೆ.
ಭಾಗವಹಿಸುವ ವಿಭಾಗಗಳು: ಸಾಮಾನ್ಯ ರೋಗ ವಿಭಾಗ, ಎಲುಬು ಮತ್ತು ಕೀಲು ರೋಗ ವಿಭಾಗ, ಕಿವಿ, ಮೂಗು ಮತ್ತು ಗಂಟಲು ವಿಭಾಗ, ಕ್ಯಾನ್ಸರ್ ತಪಾಸಣೆ, ಕಣ್ಣಿನ ವಿಭಾಗ, ಹೃದಯ ರೋಗ ಇಂಡಿಯನ್ ಕ್ಯಾನ್ಸ‌ರ್ ಸೊಸೈಟಿಯವರ ಸಹಯೋಗದೊಂದಿಗೆ ಕೆ.ಎಂ.ಸಿ. ಆಸ್ಪತ್ರೆಯ ನುರಿತ ವೈದ್ಯರ ಮಾರ್ಗಪ್ರನದಲ್ಲಿ ಕ್ಯಾನ್ಸರ್ ತಪಾಸಣೆಯು ನಡೆಯಲಿದೆ. ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಸ್ತ್ರೀಯರ ತಪಾಸಣೆ, ಪುರುಷರಿಗೆ ಹಾಗೂ ಸ್ತ್ರೀಯರಿಗೆ ಪ್ರತ್ಯೇಕ ತಪಾಸಣೆಯು ಲಭ್ಯವಿದೆ.
ವೈದ್ಯಕೀಯ ಶಿಬಿರದಲ್ಲಿ ಲಭ್ಯವಿರುವ ಸೌಲಭ್ಯಗಳು : ಉಚಿತ ಬಿ.ಪಿ. ಹಾಗೂ ಮಧುಮೇಹ (ಶುಗರ್) ತಪಾಸಣೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ದಿನೇಶ್ ನೂಯಿ – 9449268678 | ಮುರಳೀಧರ್ ಪ್ರಭು 9845734765 | 9900725474., ಜೆಸ್ಟಿನ್ ಲೋಬೊ 7411290301 , 9845698039 | 9845587855
ಸಾರ್ವಜನಿಕರು ಸಕಾಲಕ್ಕೆ ಆಗಮಿಸಿ, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದೆ.

LEAVE A REPLY

Please enter your comment!
Please enter your name here