ಕೈಕಂಬ : ಮುಂಡಾಲ ಸಮಾಜ (ರಿ.) ಗುರುಪುರ -ಕೈಕಂಬ ಇದರ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನ ಕಂದಾವರ ಪದವು ಇಲ್ಲಿ ಮುಂಡಾಲ ಟ್ರೋಫಿ-2025 ಪುರುಷರ ವಾಲಿಬಾಲ್ ಹಾಗೂ ಮಹಿಳೆಯರ ತ್ರೋಬಾಲ್ ಪಂದ್ಯಾಟವು ಇತ್ತೀಚೆಗೆ ನಡೆಯಿತು.
ಪಂದ್ಯಾಟದ ಉದ್ಘಾಟನೆಯನ್ನು ಖ್ಯಾತ ಕ್ರಿಕೆಟ್ ಆಟಗಾರ ದಯಾನಂದ ಮಾಸ್ಟರ್ ಪಡು ಅವರು ನೇರವೆರಿಸಿದರು. ಈ ಸಂದರ್ಭದಲ್ಲಿ ಅಖಿಲ ಭಾರತ ಮುಂಡಾಲ ಯುವ ವೇದಿಕೆ ಅಧ್ಯಕ್ಷರಾದ ಪ್ರದೀಪ್ ಕಾಪಿಕಾಡ್, ಹೆಲ್ಪ್ ಲೈನ್ ಸೇವಾ ತಂಡದ ಸ್ಥಾಪಕ ಅಧ್ಯಕ್ಷರಾದ ಮಹೇಶ್ ಅಮೀನ್ , ನಿವೃತ್ತ ಬ್ಯಾಂಕ್ ಉದ್ಯೋಗಿ ಕೃಷ್ಣ ಕುಳಾಯಿ, ಮುಂಡಾಲ ಸಮಾಜ (ರಿ.) ಗುರುಪುರ ಕೈಕಂಬ ಇದರ ಅಧ್ಯಕ್ಷರಾದ ಜಯಂತ ಕೊಳಂಬೆ, ವಿವಿದ ತಂಡಗಳ ಸದಸ್ಯರು ,ಹಾಗೂ ಮುಂಡಾಲ ಸಮಾಜ ಭಾಂದವರು ಉಪಸ್ಥಿತರಿದ್ದರು.
ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಒಟ್ಟು 11 ತಂಡಗಳು ಭಾಗವಹಿಸಿತು, ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ 4 ತಂಡಗಳು ಭಾಗವಹಿಸಿತು. ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಸ್ಕೂಲ್ ಫ್ರೆಂಡ್ಸ್ ತೋಕೂರು ಪಡೆಯಿತು. ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಟೀಮ್ ಪೈರ್ ಹಾಕ್ಸ್ ಮಂಗಳೂರು ಹಾಗೂ ದ್ವಿತೀಯ ಸ್ಥಾನವನ್ನು ಶ್ರೀ ಒಂಕಾರೇಶ್ವರಿ ತೋಕೂರು ಪಡೆಯಿತು. ಭಾಗವಹಿಸಿದ ಎಲ್ಲಾ ತಂಡ ಗಳಿಗೆ ಮೆಡಲ್ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.