ಮೂಡುಬಿದಿರೆ : ಕಡಂದಲೆ ಗ್ರಾಮದ ವಿದ್ಯಾಗಿರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ಆಫ್ ಮೂಡುಬಿದ್ರಿ ಮಿಡ್ ಟೌನ್ ವತಿಯಿಂದ ಸಿಸಿಟಿವಿ ಕ್ಯಾಮರಾವನ್ನು ಕೊಡುಗೆಯಾಗಿ ನೀಡಿದೆ.
ರೋಟರಿ ಜಿಲ್ಲೆ 3181 ಇದರ ಜಿಲ್ಲಾ ರಾಜ್ಯಪಾಲ ರೊ. ರಾಮಕೃಷ್ಣ ಪಿ.ಕೆ.ಯವರು ಡಿ. 12ರಂದು ಕ್ಲಬ್‌ಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಈ ಕೊಡುಗೆಯನ್ನು ಉದ್ಘಾಟಿಸಿ ಮಾತನಾಡುತ್ತಾ “ಮಕ್ಕಳು ಉತ್ತಮವಾಗಿ ಕಲಿತು ಸಾಧನೆ ಮಾಡುವ ಜೊತೆಗೆ ಸತ್ಪ್ರಜೆಗಳಾಗಿ ಮೂಡಿ ಬರಬೇಕು ಎಂದರು.
ಮಿಡ್ ಟೌನ್ ರೋಟರಿ ಅಧ್ಯಕ್ಷ ಕರುಣಾಕರ ದೇವಾಡಿಗ, ಕಾರ್ಯದರ್ಶಿ ಮುರಳೀಧರ ಕೋಟ್ಯಾನ್, ಸ್ಥಾಪಕ ಅಧ್ಯಕ್ಷ ಮಹಮ್ಮದ್ ಅಸ್ಲಂ, ಮಾಜಿ ಅಧ್ಯಕ್ಷರುಗಳಾದ ಪ್ರಶಾಂತ್ ಭಂಡಾರಿ, ಸುಶಾಂತ್ ಕರ್ಕೇರಾ ಮಾರೂರು, ಪಾಲಡ್ಕ ಪಂಚಾಯತ್ ಸದಸ್ಯ ಜಗದೀಶ್ ಕೋಟ್ಯಾನ್, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಸೀತಾರಾಮ ಸಾಲ್ಯಾನ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್ ಸಾಲ್ಯಾನ್ ಉಪಸ್ಥಿತರಿದ್ದರು. ಸಹಶಿಕ್ಷಕಿ ಪೌಲಿನ್ ಪಿಂಟೋ ಸ್ವಾಗತಿಸಿ, ಸತೀಶ್ ಶೆಟ್ಟಿ ವಂದಿಸಿದರು. ಸುಮನಾ ಎಚ್. ಎಸ್. ಅತಿಥಿಗಳನ್ನು ಗೌರವಿಸಿದರು .


