₹ 87 ಲಕ್ಷ ವೆಚ್ಚದಲ್ಲಿ ಲಕ್ಮೀನಗರ ಸಿರಿಕುಮಾರ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಯಶ್ ಪಾಲ್ ಸುವರ್ಣ ಚಾಲನೆ

0
247

ಉಡುಪಿ ನಗರಸಭೆ ಕೊಡವೂರು ವಾರ್ಡಿನ ಲಕ್ಷ್ಮೀ ನಗರ ಗರ್ಡೆಯಲ್ಲಿ ಸುಮಾರು ₹ 87 ಲಕ್ಷ ವೆಚ್ಚದಲ್ಲಿ ಅಭಿವೃಧ್ದಿಗೊಳ್ಳಲಿರುವ ಸಿರಿ ಕುಮಾರ ಕೆರೆಯ ಕಾಮಗಾರಿಗೆ ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಯಶ್ ಪಾಲ್ ಸುವರ್ಣ ನಗರಸಭಾ ವ್ಯಾಪ್ತಿಯ ಕೆರೆಗಳನ್ನು ಅಭಿವೃದ್ಧಿ ಮಾಡಿ ಪುನಶ್ಚೇತನಕ್ಕೆ ವಿಶೇಷ ಆದ್ಯತೆ ನೀಡಿ ಅಂತರ್ಜಲ ಮಟ್ಟವನ್ನು ವೃದ್ಧಿಸುವ ನಿಟ್ಟಿನಲ್ಲಿ ನಗರಸಭೆ ಮೂಲಕ ಅನುದಾನ ಒದಗಿಸಲಾಗಿದ್ದು, ಅತೀ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಂಡು ಸಿರಿ ಕುಮಾರ ಕೆರೆ ಪುನಶ್ಚೇತನಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯರಾದ ಶ್ರೀ ವಿಜಯ ಕೊಡವೂರು, ಸ್ಥಳೀಯ ಪ್ರಮುಖರಾದ ಶ್ರೀ ಭೋಜಣ್ಣ ಲಕ್ಷ್ಮೀ ನಗರ, ಶ್ರೀ ಶೇಖರ ಗರ್ಡೆ, ಶ್ರೀ ರಮೇಶ್ ಗರ್ಡೆ, ಗೆಳೆಯರ ಬಳಗ ಅಧ್ಯಕ್ಷರಾದ ಶ್ರೀ ಅರುಣ್ ಕುಮಾರ್, ವಾರ್ಡ್ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಶ್ರೀ ಅಶೋಕ್ ಶೆಟ್ಟಿಗಾರ್ , ಗುತ್ತಿಗೆದಾರ ಶ್ರೀ ಉಮೇಶ್ ನಾಯ್ಕ್. ಸ್ಥಳೀಯ ಸಂಘ ಸಂಸ್ಥೆಯ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here