ಮೂಡುಬಿದಿರೆ ಸಮಸ್ಯೆಗಳ ಬಗ್ಗೆ ತೀರಾ ನಿರ್ಲಕ್ಷ್ಯದ ಶಾಸಕರು ಹಾಗೂ ಮುಖ್ಯಾಧಿಕಾರಿಗಳು

0
143

ವರದಿ ರಾಯಿ ರಾಜ ಕುಮಾರ


ಕಳೆದ ಎಂಟು ತಿಂಗಳುಗಳಿಂದ ವಿವಿಧ ಸಮಸ್ಯೆಗಳನ್ನು ಮಾಧ್ಯಮದ ಮೂಲಕ ಜನಪ್ರತಿನಿಧಿಗಳ ಎದುರು ಪ್ರಸ್ತುತಪಡಿಸಿದರೂ ಯಾವುದೇ ಸೂಕ್ತ ಕಾರ್ಯಾಚರಣೆ ಮಾಡದೆ ನುಣಿಚಿಕೊಳ್ಳುತ್ತಿರುವ ಶಾಸಕರು ಹಾಗೂ ಮುಖ್ಯಾಧಿಕಾರಿಗಳು. ಇದರಿಂದಾಗಿ ಬಸ್ಸು ನಿಲ್ದಾಣದ ಸಮಸ್ಯೆ, ರಸ್ತೆಗಳ ಸುವ್ಯವಸ್ಥಿತ ಸಮಸ್ಯೆ, ಘನವಾಹನಗಳು ಸಂಚರಿಸಬಾರದ ಸ್ಥಳದಲ್ಲಿ ಸಂಚರಿಸುತ್ತಿರುವ ಸಮಸ್ಯೆ, ರಸ್ತೆ ಬದಿಯ ಕಾಲುದಾರಿಯ ಸಮಸ್ಯೆ ಎಲ್ಲವೂ ಇದ್ದಂತೆಯೇ ಇದ್ದು ಪ್ರಯಾಣಿಕರಿಗೆ, ದಾರಿ ಹೋಕರಿಗೆ, ಬಸ್ಸು ನಿಲ್ದಾಣದ ಪ್ರಯಾಣಿಕರಿಗೆ ಮತ್ತೆ ಮತ್ತೆ ಸಮಸ್ಯೆಗಳಾಗಿಯೇ ಮುಂದುವರಿಯುತ್ತಿದೆ. ಇದೆಲ್ಲವೂ ಕಳೆದ ಎಂಟು ತಿಂಗಳುಗಳಿಂದ ಶಾಸಕರ ಹಾಗೂ ಮುಖ್ಯಾಧಿಕಾರಿಗಳ ಗಮನಕ್ಕೆ ಹತ್ತಕ್ಕೂ ಹೆಚ್ಚು ಬಾರಿ ತರಲಾಗಿದ್ದರೂ ಸರಿಪಡಿಸುವ ಮನಸ್ಸಿಲ್ಲದಂತೆ ವರ್ತಿಸುತ್ತಿದ್ದಾರೆ ಎನ್ನುವುದು ಮೂಡುಬಿದರೆಯ ಮಹಾಜನತೆಯ ದೌರ್ಭಾಗ್ಯವೇ ಸರಿ.
ಕೇವಲ ಉದ್ಘಾಟನೆಯಲ್ಲಿ ಕಾಲ ಕಳೆಯುತ್ತಿರುವ ಶಾಸಕರು:- ದಿನಬೆಳಗಾದರೆ ಮಂಗಳೂರಿನಿಂದ ಮುಲ್ಕಿ ಅಥವಾ ಮೂಡುಬಿದಿರೆಗೆ ಐಷಾರಾಮಿ ಕಾರಿನಲ್ಲಿ ಕುಲುಕಾಡದಂತೆ ಆಗಮಿಸಿ ಉದ್ಘಾಟಿಸಿ ಹಿಂತೆರುಳುತ್ತಿರುವ ಶಾಸಕರಿಗೆ ಮೂಡುಬಿದಿರೆಯ ಹೊಂಡ ಗುಂಡಿಯ ರಸ್ತೆಗಳ ದರ್ಶನವಾಗಲಿ, ಅನುಭವವಾಗಲಿ ಆಗುವುದು ಹೇಗೆ? ಅದರಲ್ಲಿಯೂ ತನ್ನ ಕಾರಿನಲ್ಲಿ ಯಾವುದೇ ಸಾಮಾನ್ಯರನ್ನು ಕರೆದೊಯುತ್ತಿಲ್ಲ ಎಂಬ ಜಂಭ ಬೇರೆ. ಹಾಗಿದ್ದರೆ ಇವರ ಸೇವಕ ಎನ್ನುವ ಕಚೇರಿಯ ನಾಮಫಲಕದ ಉಪಯೋಗವೇನು? ಇವರು ಕೇವಲ ನಾಮಫಲಕದ, ಸ್ಥಳೀಯವಾಗಿ ಸ್ಪಂದಿಸದೆ ಇರುವ ಹೊರಗಿನ ಶಾಸಕರೆನ್ನುವ ಜನರ ಮಾತು ಅಕ್ಷರಶ ಸತ್ಯ. ಇದೀಗ ಜನಸಾಮಾನ್ಯರೇ ಒಟ್ಟಾಗಿ ಶಾಸಕರಿಗೆ ತೋರಿಸಿ ಕೊಡಬೇಕಾದ ಅನಿವಾರ್ಯತೆ ಬಂದಿದೆ.

ಇಲ್ಲವಾದಲ್ಲಿ ಕಳೆದ ಎಂಟು ತಿಂಗಳುಗಳಿಂದ ಬಸ್ಸು ನಿಲ್ದಾಣದ ಸಮಸ್ಯೆಯಾಗಿಯೇ ಉಳಿಯಲು ಸಾಧ್ಯವಿರುತ್ತಿರಲಿಲ್ಲ. ಬಸು ನಿಲ್ದಾಣದ ಅಂಗಡಿಗಳವರನ್ನು, ಬಸ್ಸಿನ ಮಾಲೀಕರುಗಳನ್ನು, ಏಜೆಂಟರುಗಳನ್ನು ಸೇರಿಸಿ ಮೀಟಿಂಗ್ ನಡೆಸಿ ನಿರ್ಧರಿಸುವ ತಾಕತ್ತು ಈ ಶಾಸಕರಿಗೆ ಇಲ್ಲವೇ ಎನ್ನುವ ಸಾಮಾನ್ಯರ ಮಾತನ್ನು ಶಾಸಕರು ಈತನಕವೂ ನಿರಾಕರಿಸಿಲ್ಲ.ಇನ್ನು ಮುಖ್ಯಾಧಿಕಾರಿಯ ವಿಚಾರವನ್ನು ಏನೆಂದು ಹೇಳಲಿ, ಕೇವಲ ಒಂದು ವಾರದಲ್ಲಿ ಬಿಇಓ ಕಚೇರಿಯ ಬಳಿಯ ಸಾರ್ವಜನಿಕ ಪುರಸಭಾ ಸ್ಥಳವನ್ನು ಅತಿಕ್ರಮಣ ಮಾಡಿದ ಖಾಸಗಿ ಅವರಿಂದ ಬಿಡುಗಡೆಗೊಳಿಸುತ್ತೇನೆ ಎಂದು ಮೀಟಿಂಗ್ನಲ್ಲಿ ಹೇಳಿದ ಮಾತು ಕಡತದಲ್ಲಿಯೇ ಉಳಿದಿದೆ. ಮುಖ್ಯರಸ್ತೆಯ ಪಾದಾಚಾರಿಗಳ ಸ್ಥಳವನ್ನು ಅತಿಕ್ರಮಿಸಿದ ಅಂಗಡಿಗಳವರ ಮೇಲೆ ಕ್ರಮ ಕೈಗೊಳ್ಳಲು ಮುಂದಾದ ತನ್ನದೇ ಪುರಸಭೆಯ ಕೈ ಕೆಳಗಿನ ಅಧಿಕಾರಿಗಳಿಗೆ ಒಪ್ಪಿತವನ್ನು ನೀಡದೆ, ತಾನು ಕ್ರಮ ಕೈಗೊಳ್ಳದೆ, ಹೇಳಿದಾಗಲೆಲ್ಲ ಒಂದಲ್ಲ ಒಂದು ಸಬೂಬು ನೀಡುತ್ತಾ ನುಣುಚಿಕೊಳ್ಳುತ್ತಿರುವ ಜಾಯಮಾನ ಮುಖ್ಯಾಧಿಕಾರಿಗಳದ್ದು. ಕಳೆದ ಆರು ತಿಂಗಳುಗಳಿಂದ ಸತತವಾಗಿ ಚಿತ್ರ ಸಮೇತ ವರದಿ ಮಾಡಿದ್ದರು ಯಾವುದಕ್ಕೂ ಸ್ಪಂದಿಸದೆ ಇರುವ, ಪುರಸಭೆಯಲ್ಲಿ ಕೈಗೊಂಡ ನಿರ್ಣಯಗಳೆಲ್ಲವನ್ನು ಕಡತದಲ್ಲಿಯೇ ಹೂತು ಹಾಕಿರುವ ಮುಖ್ಯಾಧಿಕಾರಿಗಳು ಮೂರು ಸ್ಥಳದ ಜವಾಬ್ದಾರಿ ಇದೆ ಎಂದು ನುಣುಚಿಕೊಳ್ಳುವದಕ್ಕೆ ಜನರೇ ಕ್ರಮ ಕೈಗೊಳ್ಳಬೇಕಾಗಿದೆ. ಪ್ರಸ್ತುತ ತಿಳಿದುಬಂದಂತೆ ಬಸ್ಸು ನಿಲ್ದಾಣದಿಂದ ಹೊರಕ್ಕೆ ಚಲಿಸುವ ಏಕಮುಖ ರಸ್ತೆಯ ಪರಿಸ್ಥಿತಿಯ ಬಗ್ಗೆ ಸ್ವತಹ ಬಸ್ಸಿನ ಏಜೆಂಟರಗಳು, ನಿರ್ವಾಹಕರುಗಳು, ಆಸಕ್ತ ಪ್ರಯಾಣಿಕರು ಆದಷ್ಟು ಶೀಘ್ರಶಾಸಕರು ಹಾಗೂ ಮುಖ್ಯಾಧಿಕಾರಿಗಳನ್ನು ಘೇರಾವ್ ಮಾಡುವ ಯೋಜನೆಯನ್ನುಹಾಕಿಕೊಂಡಿದ್ದೇವೆಂದು ತಿಳಿಸುತ್ತಾರೆ.ಫೋಟೋಗಳಲ್ಲಿ ರಸ್ತೆಯ ಪರಿಸ್ಥಿತಿಯನ್ನು ಒಮ್ಮೆ ವೀಕ್ಷಿಸಿ:

LEAVE A REPLY

Please enter your comment!
Please enter your name here