ಮೂಡುಬಿದರೆ ತಾಲೂಕಿನ ಬಿರಾವು, ಕರಿಂಜೆ, ಹೊಸಬೆಟ್ಟು ಇತ್ಯಾದಿ ಸಮೀಪದ ಗ್ರಾಮಗಳಲ್ಲಿ ಎಲ್ಲಾ ಮೊಬೈಲ್ಗಳ ನೆಟ್ವರ್ಕ್ ಸಂಪೂರ್ಣ ಸ್ಥಗಿತವಾಗಿದ್ದು ನಾಗರೀಕರಿಗೆ ಬಹಳಷ್ಟು ತೊಂದರೆಯನ್ನು ಉಂಟುಮಾಡುತ್ತಿದೆ. ಮೂಡುಬಿದಿರೆ ಹೆಚ್ಚಿನ ಇತರ ಪ್ರದೇಶಗಳಲ್ಲಿ ಕೂಡ ಮೊಬೈಲ್ ನೆಟ್ವರ್ಕ್ ನ ತೊಂದರೆಗಳು ಕಂಡುಬರುತ್ತಿದೆ. ಇದರಿಂದಾಗಿ ದಿನನಿತ್ಯದ ಜೀವನ ಅರ್ಥವ್ಯಸ್ತವಾಗಿರುವುದು ಹಲವಾರು ಸಂದರ್ಭಗಳಲ್ಲಿ ಗೋಚರಿಸಿದೆ.
ಕೆಲವು ನೆಟ್ವರ್ಕ್ಗಳ ಟವರ್ 100 -200 ಮೀಟರ್ ದೂರದಲ್ಲಿದ್ದರೂ ಸಹ ನೆಟ್ವರ್ಕ್ ಸಂಪರ್ಕ ಸಿಗದೆ, ಸಿಕ್ಕಿದರು ಅರೆಬರಿಯಾಗಿ ಕೇಳಿಸಿ ತೊಂದರೆ ಅನುಭವಿಸಿರುತ್ತಿದ್ದಾರೆ.
ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್, ಯುಪಿಐ ಪಾವತಿ, ಆನ್ಲೈನ್ ವ್ಯವಹಾರ, ಸರಕಾರಿ ಸೇವೆಯ ಇಂಟರ್ನೆಟ್, ಇತ್ಯಾದಿಗಳು ಇಲ್ಲದೆ ಅತಿ ತುರ್ತು ಸಂದರ್ಭಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಆಂಬುಲೆನ್ಸ್, ಪೊಲೀಸ್, ಅಗ್ನಿಶಾಮಕ ಇತ್ಯಾದಿಗಳಿಗೆ ಕರೆ ಮಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿ ಕಳೆದ ಎರಡು ಮೂರು ದಿನಗಳಿಂದ ಕಂಡುಬರುತ್ತಿದೆ ಎಂದು ಆ ಪ್ರದೇಶದ ನಾಗರಿಕರು ದೂದು ನೀರು ನೀಡಿರುತ್ತಾರೆ. ಅತ್ಯಂತ ಅಪಾಯಕಾರಿ ಸಂದರ್ಭಗಳಲ್ಲಿ ಕೂಡ ಸಂವಹನ ಸಾಧ್ಯವಾಗದೆ ತೊಂದರೆಯನ್ನು ಕೆಲವರು ಅನುಭವಿಸಿದ ಬಗ್ಗೆ ದೂರು ನೀಡುತ್ತಾರೆ. ಪರೀಕ್ಷೆಯ ಸಂದರ್ಭಗಳಲ್ಲಿ ಮಕ್ಕಳಿಗೆ ವೈಫೈ ಸೌಲಭ್ಯವು ಇಲ್ಲದೆ ತೊಂದರೆ ಆಗಿರುವುದನ್ನು ದಾಖಲಿಸಿರುತ್ತಾರೆ. ಅಸ್ವಸ್ಥರು, ವೃದ್ಧರು, ರೋಗಿಗಳ ಪರಿಸ್ಥಿತಿಯಂತೂ ಹೇಳಲು ಅಸಾಧ್ಯ. ವ್ಯಾಪಾರಿಗಳಂತೂ ಆರ್ಥಿಕ ನಷ್ಟದಿಂದ ಬಳಲುತ್ತಿದ್ದಾರೆ.
ಸಂಬಂಧಿಸಿದ ನೆಟ್ವರ್ಕ್ ಕಂಪನಿಗಳವರು ಆದಷ್ಟು ಶೀಘ್ರ ಮೂಡುಬಿದಿರೆ ಹಾಗೂ ಪರಿಸರದ ಗ್ರಾಮಗಳಲ್ಲಿ ಆಗಿರುವ ತೊಂದರೆಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.
ವರದಿ ರಾಯಿ ರಾಜ ಕುಮಾರ

