ಕೇಂದ್ರದ ಮೋದಿ ಸರಕಾರ ಭಾರತೀಯ ಜನರನ್ನು ರಕ್ಷಿಸಲು ವಿಫಲ:ಶಾಹಿಲ್ ಮಂಚಿಲ!!

0
119

ಮಂಗಳೂರು ವಿಧಾನ ಸಭಾ ಕ್ಷೇತ್ರದ ಉಳ್ಳಾಲ ತಾಲೂಕು ಎನ್.ಎಸ್.ಯು.ಐ ವತಿಯಿಂದ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಬೀಕರ ಭಯೋತ್ಪಾದಕ ದಾಳಿಯಲ್ಲಿ ಮಡಿದವರಿಗೆ ಗೌರವ ಮತ್ತು ಒಗ್ಗಟ್ಟಿನ ಸಂಕೇತವಾಗಿ ಮೊಂಬತ್ತಿ ನಡಿಗೆ ಹಾಗೂ ಮೌನ ಪ್ರಾರ್ಥನೆ ಕೊಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡುಪದವಿನಲ್ಲಿ ನಡೆಯಿತು.

ಮಂಗಳೂರು ವಿಧಾನ ಸಭಾ ಕ್ಷೇತ್ರದ ಉಳ್ಳಾಲ ತಾಲೂಕು ಎನ್.ಎಸ್.ಯು.ಐ ಅಧ್ಯಕ್ಷ ಶಾಹಿಲ್ ಮಂಚಿಲ ಭಯೋತ್ಪಾದಕರ ದಾಳಿ ಸಹಿಸಲ್ಲ, ಕೇಂದ್ರದ ಮೋದಿ ಸರಕಾರ ಭಾರತೀಯ ಜನರನ್ನು ರಕ್ಷಿಸಲು ವಿಫಲವಾಗಿದೆ ಎಂದು ಘೋಷಣೆ ಕೂಗಿದರು,ಈ ಸಂದರ್ಭದಲ್ಲಿ 300 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಮೊಂಬತ್ತಿ ನಡಿಗೆಯಲ್ಲಿ ಪಾಲ್ಗೊಂಡಿದ್ದರು.

ಕೊಣಾಜೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಝರ್ ಷಾ ಪಟ್ಟೋರಿ ಮಾತನಾಡಿ ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ತಾಣಕ್ಕೆ ಕರ್ನಾಟಕದಿಂದ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯದ ಜನರು ಕಾಶ್ಮೀರವನ್ನು ಇಷ್ಟ ಪಟ್ಟು ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಸಾಮಾನ್ಯ ಜನರ ಮೇಲೆ, ಪ್ರವಾಸಿಗರ ಮೇಲೆ ಪೈಶಾಚಿಕ ಮತ್ತು ಹೀನ ಕೃತ್ಯಕ್ಕೆ ಕೈ ಹಾಕಿದ್ದಾರೆ, ಭಾರತೀಯರಾದ ನಾವು ಇದನ್ನು ಸಹಿಸಲು ಸಾಧ್ಯವಿಲ್ಲ, ಇದನ್ನು ತೀವ್ರವಾಗಿ ಖಂಡಿಸುತ್ತೇವೆ, ಭಯೋತ್ಪಾದಕರು ರಾಕ್ಷಸ ಪ್ರವೃತಿಯವರು, ಇವರ ಮೇಲೆ ಕೇಂದ್ರ ಸರಕಾರ ದಿಟ್ಟ ಹೆಜ್ಜೆ ಇಟ್ಟು ಇವರನ್ನು ನಮ್ಮ ಸೈನಿಕರು ಹುಟ್ಟಡಗಿಸಬೇಕು ಎಂದರು.

  ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು ಪಾವೂರು,ಬಾಳೆಪುಣಿ ಗ್ರಾ.ಪಂ ಉಪಾಧ್ಯಕ್ಷ ಸಿ.ಎಮ್ ಶರೀಪ್ ಪಟ್ಟೋರಿ, ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ ತಾಲೂಕು ಪ್ರಧಾನ ಕಾರ್ಯದರ್ಶಿ ಇಫ್ತಿಕಾರ್ ಫರೀದ್, ಎನ್.ಎಸ್.ಯು..ಐ ಉಪಾಧ್ಯಕ್ಷ ದರ್ಶನ್ ಕುಂದರ್,ಅಭಿಷೇಕ್ ವಾಲ್ಮೀಕಿ ಎಸ್.ಯು. ಐ ಮಂಗಳೂರು ವಿಧಾನ ಸಭೆ ಉಳ್ಳಾಲ ತಾಲೂಕು ಪ್ರಧಾನ ಕಾರ್ಯದರ್ಶಿ ಅಶ್ವಿನ್ ಮತ್ತು ಮಿಹಾನ್ ಹುಸೇನ್,ಕೋಟೆಕಾರ್ ವಲಯ ಎನ್.ಎಸ್.ಯು.ಐ ಅಧ್ಯಕ್ಷ ಫಹೀಂ, ಹಾಗೂ ಅಶ್ರಫ್ ಉಲ್ಲಾಳ್ ಮಂಗಳೂರು ವಿಧಾನ ಸಭಾ ಕ್ಷೇತ್ರದ ಉಳ್ಳಾಲ ತಾಲೂಕು ಎನ್.ಎಸ್.ಯು.ಐ ಉಪಾಧ್ಯಕ್ಷ ವಿಶಾಲ್ ಲೋಬೋ, ಸಾಮಾಜಿಕ ಜಾಲತಾಣದ ಉಸ್ತುವಾರಿ ಫಾಝಿಲ್, ಹಾಗೂ ಶಾಫಿ ನಡುಪದವು, ಶಹಲ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here