ಮೊಗ್ರು : ಅಲೆಕ್ಕಿ ಶ್ರೀರಾಮ ಶಿಶು ಮಂದಿರ ದಲ್ಲಿ ಅಕ್ಟೋಬರ್ 01 ರಂದು ಶಾರದಾ ಪೂಜೆ,ಮಕ್ಕಳಿಗೆ ಅಕ್ಷರ ಅಭ್ಯಾಸ ಮತ್ತು ವಾಹನ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಶ್ರೀರಾಮ ಸೇವಾ ಟ್ರಸ್ಟ್ ರಿ.ಅಲೆಕ್ಕಿ, ಇದರ ಪದಾಧಿಕಾರಿಗಳು ಮತ್ತು ಸದಸ್ಯರು, ಶ್ರೀರಾಮ ಮಹಿಳಾ ಮಂಡಳಿಯ ಪದಾಧಿಕಾರಿಗಳು, ಶ್ರೀ ರಾಮ ಶಿಶು ಮಂದಿರದ ಮಕ್ಕಳು,ಪೋಷಕರು,ಮಾತೃ ಬಳಗ ಮತ್ತು ಮಾತಾಜಿಯುವರು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು. ದಿನೇಶ್ ಕೇಳೆಂಜಿಮಾರ್ ಇವರು ಉಪಾಹಾರದ ವ್ಯವಸ್ಥೆ ಮಾಡಿದ್ದರು. ಮಾತಜಿಯವರು ಮತ್ತು ಮಕ್ಕಳು ಭಜನೆಯ ಮೂಲಕ ಶಾರದಾ ಮಾತೆಯನ್ನು ಸ್ತುತಿಸಿದರು.