ಮಾ.4 – 8 : ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ

0
11

ಮುಲ್ಕಿ: ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಮಾರ್ಚ್ 4 ರಿಂದ 8 ರವರೆಗೆ ನಡೆಯಲಿದ್ದು ಬ್ರಹ್ಮಕಲಶೋತ್ಸವವನ್ನು ಯಶಸ್ವಿಯಾಗಿ ನೆರವೇರಿಸುವ ಉದ್ದೇಶದಿಂದ, ಸೇವೆಯಲ್ಲಿ ತೊಡಗಿರುವ ಎಲ್ಲಾ ಉಪಸಮಿತಿ ಪದಾಧಿಕಾರಿಗಳ ಮತ್ತು ಸದಸ್ಯರುಗಳ ಕೊನೆಯ ಮಹತ್ವದ ಸಭೆಯು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರ ನೇತೃತ್ವದಲ್ಲಿ ಸಸಿಹಿತ್ಲು ಭಗವತಿ ದೇವಸ್ಥಾನದ ದಿವ್ಯಾಮೃತ ಭೋಜನ ಮಂದಿರದಲ್ಲಿ ಭಾನುವಾರ ನಡೆಯಿತು.


ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಲ್ಚಡ ಮಾತನಾಡಿ ಮಾ.4 ರಿಂದ 8ರವರೆಗೆ ನಡೆಯಲಿರುವ ಸಸಿಹಿತ್ಲು ಶ್ರೀ ಭಗವತಿ ದೇವಿಯ ಬ್ರಹ್ಮಕಲಶೋತ್ಸವ ಯಶಸ್ವಿಯಾಗಲು ಸಮಿತಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳು ಹೆಗಲಿಗೆ ಹೆಗಲು ಕೊಟ್ಟು ಸ್ವಯಂಸೇವಕರ ಜೊತೆ ಆಹರ್ನಿಶಿ ದುಡಿಯುತ್ತಿದ್ದು ಬ್ರಹ್ಮಕಲಶೋತ್ಸವ ವಿಶ್ವಕ್ಕೆ ಮಾದರಿಯಾಗಲಿ, ಎಂದು ಹೇಳಿದರು
ಅವರು ಮಾತನಾಡಿ ಕ್ಷೇತ್ರದಲ್ಲಿ ಈಗಾಗಲೇ ಸುಮಾರು 20 ಲಕ್ಷ ವೆಚ್ಚದಲ್ಲಿ ವಿಧಾನಪರಿಷತ್ ಸದಸ್ಯರುಗಳ ಅನುದಾನದಿಂದ ದೇವಸ್ಥಾನದ ಎದುರು ಭಾಗದ ರಸ್ತೆ ಸುಸಜ್ಜಿತವಾಗಿ ಕಾಂಕ್ರಿಟೀಕರಣ ನಡೆಯುತ್ತಿದೆ, ಹಳೆಯಂಗಡಿ ಪಂಚಾಯತ್ ವತಿಯಿಂದ 4.5 ಲಕ್ಷ ವೆಚ್ಚದಲ್ಲಿ ದೇವಸ್ಥಾನದ ಎದುರು ಭಾಗ ಚರಂಡಿ ಕಾಮಗಾರಿ ಹಾಗೂ ಹೈ ಮಾಸ್ಟ್ ದೀಪ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ,
ಶಾಸಕ ಉಮಾನಾಥ ಕೋಟ್ಯಾನ್ ಸುಮಾರು 10 ಲಕ್ಷ ವೆಚ್ಚದ ಅನುದಾನದಲ್ಲಿ ಹಳೆಯಂಗಡಿ- ಸಸಿಹಿತ್ಲು ರಸ್ತೆ ಫೇವರ್ ಫಿನಿಷ್ ಕಾಮಗಾರಿ ನಡೆಯಲಿದೆ ಎಂದರು
ಮಾ. 4ರಂದು ಕ್ಷೇತ್ರದ ಬ್ರಹ್ಮಕಲಕೋತ್ಸವದ ಅಂಗವಾಗಿ ಭವ್ಯ ಹೊರೆ ಕಾಣಿಕೆ ಮುಕ್ಕದಿಂದ ಕ್ಷೇತ್ರದ ವರೆಗೆ ಕಾಲ್ನಡಿಗೆ ಮೂಲಕ ನಡೆಯಲಿದೆ. ಕ್ಷೇತ್ರಕ್ಕೆ ಲಕ್ಷಾಂತರ ಮಂದಿ ಬ್ರಹ್ಮಕಲಶೋತ್ಸವದ ಸಂದರ್ಭ ಭೇಟಿ ನೀಡುವ ನಿರೀಕ್ಷೆಯಿದ್ದು ಯಶಸ್ವಿಗೊಳಿಸಿ ಎಂದರು.
ಸ್ವಯಂ ಸೇವಕ ಸಮಿತಿಯ ವಿನೋದ್ ಸಾಲ್ಯಾನ್ ಬೆಳ್ಳಾಯರು ಮಾತನಾಡಿ ಬ್ರಹ್ಮಕಲಶೋತ್ಸವ ಸಂದರ್ಭ ಕ್ಷೇತ್ರಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದಾಗ ನಳಿನ್ ಕುಮಾರ್ ಕಟೀಲು ಉತ್ತರಿಸಿ ಈ ಬಗ್ಗೆ ಬಸ್ ಮಾಲಕರ ಜೊತೆ ಮಾತನಾಡಿ ಕ್ಷೇತ್ರಕ್ಕೆ ಉಚಿತ ಬಸ್ ವ್ಯವಸ್ಥೆ ಮಾಡಲಾಗುವುದು ಹಾಗೂ ಕ್ಷೇತ್ರದ ಪಾರ್ಕಿಂಗ್ ವ್ಯವಸ್ಥೆ ಬಳಿಯಿಂದ ವಯೋ ವೃದ್ಧರಿಗೆ ಕ್ಷೇತ್ರಕ್ಕೆ ಬರಲು ಉಚಿತ ಎಲೆಕ್ಟ್ರಿಕ್ ಆಟೋ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ವಾಮನ್ ಇಡ್ಯಾ ಮಾತನಾಡಿ ಬ್ರಹ್ಮಕಲಶೋತ್ಸವದ ಸಂದರ್ಭ ಕ್ಷೇತ್ರಕ್ಕೆ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆಯಿದ್ದು ಅತಿಥಿಸತ್ಕಾರ ಮನೋಭಾವ ಬೆಳೆಸಿಕೊಂಡರೆ ಕ್ಷೇತ್ರದ ಬ್ರಹ್ಮ ಕಲಶ ಯಶಸ್ವಿಯಾಗಲಿದೆ ಎಂದರು
ಬಳಿಕ 36 ವಿವಿಧ ಸಮಿತಿಗಳಾದ ಭಜನಾ ಸಮಿತಿ, ಸ್ವಾಗತ ಸಮಿತಿ ಅತಿಥಿ ಸತ್ಕಾರ ಸಮಿತಿ ಸ್ವಯಂಸೇವಕ ಸಮಿತಿ, ಅನ್ನ ಸಂತರ್ಪಣೆ ಸಮಿತಿ, ಹಣಕಾಸು ನಿರ್ವಹಣಾ ಸಮಿತಿ, ಮಾತೃಮಂಡಳಿ ಹೊರೆ ಕಾಣಿಕೆ ಸಮಿತಿ, ಉಗ್ರಾಣ ಸಮಿತಿ, ಪಾಕಶಾಲಾ ನಿರ್ವಹಣಾ ಸಮಿತಿ, ತೀರ್ಥ ಪ್ರಸಾದ ಸಮಿತಿ, ಧಾರ್ಮಿಕ ಸಭಾ ನಿರ್ವಹಣೆ ಸಮಿತಿ, ಸಾಂಸ್ಕೃತಿಕ ಸಮಿತಿ, ಕಾರ್ಯಕಾರಿ ಸಮಿತಿ, ಮಾಧ್ಯಮ ಸಮಿತಿ ಆಮಂತ್ರಣ ಸಮಿತಿ, ಪಾರ್ಕಿಂಗ್ ವ್ಯವಸ್ಥೆ, ಮತ್ತಿತರ ಸಮಿತಿಯ ಸದಸ್ಯರುಗಳು ಮಾತನಾಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ ಭಗವತಿಯ ಸೇವೆಯ ಮುಖಾಂತರ ಬ್ರಹ್ಮಕಲಶೋತ್ಸವ ಯಶಸ್ವಿಯಾಗಲಿ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕ್ಷೇತ್ರದ ಅರ್ಚಕ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ, ಸಮಿತಿಯ ಪದಾಧಿಕಾರಿಗಳಾದ ವಿಶ್ವನಾಥ ಬೆಳ್ಚಡ,ಪಂದಬೆಟ್ಟು, ಕೆ.ಸುದರ್ಶನ್ ಮೂಡಬಿದ್ರೆ, ಕಸ್ತೂರಿ ಪಂಜ, ಈಶ್ವರ ಕಟೀಲ್, ದಿವಾಕರ ಸಾಮಾನಿ, ಗೀತಾ ಪಿ ಕುಮಾರ್, ಸುನಿಲ್ ಆಳ್ವ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಂಗೇರ, ಕೋಶಾಧಿಕಾರಿ ಸುರೇಶ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.
ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಯಾಗಿದ್ದು ಕಿನ್ನಿಗೋಳಿ ಪಟ್ಟಣ ಪಂಚಾಯತ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗುರುರಾಜ್ ಮಲ್ಲಿಗೆಯಂಗಡಿ ರವರನ್ನು ಗೌರವಿಸಲಾಯಿತು.
ಸಮಿತಿಯ ರಾಜೇಂದ್ರ ಪ್ರಸಾದ್ ನಿರೂಪಿಸಿದರು(ಚಿತ್ರ ಇದೆಕಿನ್ನಿಗೋಳಿ ಪಟ್ಟಣ ಪಂಚಾಯತ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗುರುರಾಜ್ ಮಲ್ಲಿಗೆಯಂಗಡಿ ರವರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here