ಮದುವೆ ವಿವಾದ ಬೆನ್ನಲ್ಲೇ ಮೊನಾಲಿಸಾ ಚಿತ್ರಕ್ಕೆ ಬ್ರೇಕ್

0
24

ಮುಂಬೈ : ಮಹಾಕುಂಭಮೇಳದ ಮೂಲಕ ವೈರಲ್ ಆದ ಮೊನಾಲಿಸಾ ಬಳಿಕ ಹಲವು ಕಾರ್ಯಕ್ರಮಗಳ ಮೂಲಕ ಸದ್ದು ಮಾಡಿದ್ದರು. ಅಷ್ಟೇ ವೇಗದಲ್ಲಿ ನಾಯಕಿಯಾಗಿ ಸಿನಿಮಾದಲ್ಲೂ ಅವಕಾಶ ಪಡೆದು ಮಿಂಚಿದರು. ಸಿನಿಮಾ ಶೂಟಿಂಗ್ ನಡುವೆ ಮೊನಾಲಿಸಾ ಮುಸ್ಲಿಮ್ ಯುವಕನ ಜೊತೆ ಮದುವೆಯಾಗಿ ಭಾರಿ ವಿವಾದ ಸೃಷ್ಟಿಸಿದ್ದಾರೆ.

ಮೊನಾಲಿಸಾ ಪೋಷಕರೇ ಇದು ಲವ್ ಜಿಹಾದ್ ಎಂದು ಆರೋಪಿಸಿದ್ದಾರೆ. ಆದರೆ ವಿರೋಧಗಳ ನಡುವೆ ಮದುವೆಯಾದ ಮೊನಾಲಿಸಾ, ತನ್ನನ್ನು ನಾಯಕಿಯಾಗಿ ಮಾಡಿದ ಡೈರ ಆಫ್ ಮಣಿಪುರ ನಿರ್ದೇಶಕನ ವಿರುದ್ಧವೇ ಕಿರುಕುಳ ಆರೋಪ ಮಾಡಿದ್ದರು. ಇದೀಗ ನಿರ್ದೇಶಕ ಸನೋಜ್ ಮಿಶ್ರಾ ಈ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಇಷ್ಟೇ ಅಲ್ಲ ಮೊನಾಲಿಸಾ ನಾಯಕಿಯಾದ ಸಿನಿಮಾ ಅರ್ಧಕ್ಕೆ ಕೈಬಿಟ್ಟಿದ್ದಾರೆ.

ಮುಸ್ಲಿಮ್ ಯುವಕನ ಜೊತೆ ಓಡಿ ಹೋಗಿ ಕೇರಳದಲ್ಲಿ ಮದುವೆಯಾದ ಮೊನಾಲಿಸಾ ಬಳಿಕ ಡೈರಿ ಆಫ ಮಣಿಪುರ ಸಿನಿಮಾ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಗಂಭೀರ ಆರೋಪ ಮಾಡಿದ್ದಳು. ಶೂಟಿಂಗ್ ಸೆಟ್‌ನಲ್ಲಿ ತನಗೆ ಕಿರುಕುಳ ನೀಡಲಾಗಿದೆ. ತನ್ನ ಪೋಷಕರು ಸಹಕರಿಸು ಎಂದಿದ್ಧರು ಎಂದು ಗಂಭೀರ ಆರೋಪ ಮಾಡಿದ್ದರು. ಇದೀಗ ನಿರ್ದೇಶಕ ಸನೋಜ್ ಮಿಶ್ರಾ, ಕೆಲ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಮೊನಾಲಿಸಾ ನನ್ನ ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದಾರೆ. ಇದಕ್ಕೆ ಕಾರಣ ನಾನು ಆಕೆಯ ಇಚ್ಚೆಗೆ ವಿರುದ್ಧವಾಗಿದ್ದೆ. ಆಕೆಯ ಪೋಷಕರು, ಮೊನಾಲಿಸಾ ಸೇರಿದಂತೆ ಆಪ್ತ ಕುಟುಂಬಸ್ಥ ರುು ಶೂಟಿಂಗ್ ಸೆಟ್‌ನಲ್ಲಿದ್ದರು. ಅವೆರಲ್ಲರು ನಮ್ಮ ಮನೆಯಲ್ಲೇ ತಂಗಿದ್ದರು. ನಾನು ಯಾವುದೇ ರೀತಿಯಲ್ಲಿ ಕಿರುಕುಳ ನೀಡಿದ್ದರೆ, ಅವರ ಕುಟುಂಬಸ್ಥರು, ಪೋಷಕರು ಅಥವಾ ಪೊಲೀಸರಿಗೆ ಹೇಳಬಹುದಿತ್ತು. ಹಾಗೆ ಮಾಡಿಲ್ಲ. ಇದೀಗ ಮದುವೆಯಾಗಿ ಆರೋಪ ಮಾಡುತ್ತಿದ್ದಾರೆ. ಆಕೆಯ ಈ ಮದುವೆಯನ್ನು ಮೊನಾಲಿಸಾ ಪೋಷಕರಂತೆ ನಾನು ವಿರೋಧಿಸಿದ್ದೆ. ಇದೇ ಕಾರಣಕ್ಕೆ ನನ್ನ ಮೇಲೆ ಆರೋಪ ಮಾಡಿದ್ದಾರೆ. ಸಿನಿಮಾ ಕರಿಯರ್ ಬಗ್ಗೆ ಫೋಕಸ ಮಾಡಲು ಸೂಚಿಸಿದ್ದೆ. ಆದರೆ ಪ್ರೀತಿ ಪ್ರೇಮ ಎಂದು ಗೌರವಯುತವಾಗಿ ನಡೆದುಕೊಳ್ಳಲಿಲ್ಲ ಎಂದು ಸನೋಜ್ ಮಿಶ್ರಾ ಹೇಳಿದ್ದಾರೆ. ಆಕೆಯ ವಿರುದ್ಧ ನಿಂತ ಕಾರಣ ಈ ಆರೋಪ ಮಾಡಿದ್ದಾಳೆ. ಈಗಲೂ ಆಕೆ ದೂರು ನೀಡಿ ಕಾನೂನು ಹೋರಾಟ ಮಾಡಲು ಮುಕ್ತವಾಗಿದ್ಧಾಳೆ ಎಂದಿದ್ದಾರೆ.

ಡೈರಿ ಆಫ್ ಮಣಿಪುರ ಸಿನಿಮಾ ಸನೋಜ್ ಮಿಶ್ರಾ ಅವರ ಬಹುನಿರೀಕ್ಷಿತ ಸಿನಿಮಾ. ಮೊನಾಲಿಸಾ ಜನಪ್ರಿಯತೆ ಬೆನ್ನಲ್ಲೇ ನಾಯಕಿಯಾಗಿ ಆಯ್ಕೆ ಮಾಡಿ ಆಕೆಗೆ ನಟನೆ, ಡೈಲಾಗ್ ಸೇರಿದಂತೆ ಸಿನಿಮಾದ ಪ್ರತಿ ಸೀನ್ ತರಬೇತಿ ನೀಡಲಾಗಿತ್ತು. ಇದೀಗ ಮೊನಾಲಿಸಾ ಗಂಭೀರ ಆರೋಪ ಮಾಡಿ ದೂರವಾಗಿರುವ ಕಾರಣ ಡೈರಿ ಆಫ್ ಮಣಿಪುರ ಸಿನಿಮಾ ಪ್ರಾಜೆಕ್ಟ್ ಕೈಬಿಡುವುದಾಗಿ ಹೇಳಿದ್ದಾರೆ. ಈ ಮೂಲಕ ಮೊನಾಲಿಸಾ ಸಿನಿಮಾ ಕರಿಯರ್ ಬಹುತೇಕ ಅಂತ್ಯವಾಗಿದೆ.

LEAVE A REPLY

Please enter your comment!
Please enter your name here