ನಿವೃತ್ತ ಸರ್ಕಾರಿ ನೌಕರರ ಮಾಸಿಕ ಸಭೆ

0
88


ವರದಿ ರಾಯಿ ರಾಜ ಕುಮಾರ
ಹಿಂದುಳಿದ ವರ್ಗ ಹಾಗೂ ಸಮಾಜದ ಅಭಿವೃದ್ಧಿಯ ಅತೀ ಅಗತ್ಯವಿದೆ. ಅದರಲ್ಲೂ ಪರಿಶಿಷ್ಟರ ಮಕ್ಕಳಿಗೆ ಸಾಧ್ಯವಾದಷ್ಟು ಉತ್ತೇಜನವನ್ನು ನೀಡಿ ಅವರು, ಅವರ ಮನೆಯವರು ಸರ್ವಾಂಗೀಣ ಬೆಳವಣಿಗೆಯಾಗುವಂತೆ ಪ್ರಯತ್ನಿಸ ಬೇಕು. ಅವರಿಗೆ ಸೂಕ್ತ, ಉತ್ತಮ ಶಿಕ್ಷಣ, ತರಬೇತಿ ದೊರಕಲು ನಿವೃತ್ತರೂ ಕ್ರಮ ಕೈಗೊಳ್ಳಿ ಎಂದು ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಪ್ರೊ. ಕುರಿಯನ್ ಕೇಳಿಕೊಂಡರು.
ಅವರು ದಶಂಬರ 20 ರಂದು ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆದ ನಿವೃತ್ತ ಸರ್ಕಾರಿ ನೌಕರರ ಮಾಸಿಕ ಸಭೆಯಲ್ಲಿ ವಿಶೇಷ ಅತಿಥಿಯಾಗಿ ಮಾತನಾಡಿದರು.
ನಿವೃತ್ತರ ಅನುಭವಗಳನ್ನು ಸಮಾಜ ಸದುಪಯೋಗಿಸಿಕೊಳ್ಳ ಬೇಕೆಂದು ವೇದಿಕೆಯಲ್ಲಿದ್ದ ಅಧ್ಯಕ್ಷ ಟಿ.ಎನ್.ಕೆಂಬಾರೆ, ಕಾರ್ಯದರ್ಶಿ ಎಲ್.ಜೆ.ಫೆರ್ನಾಂಡಿಸ್, ರಾಜಾರಾಂ, ಹಾಗೂ ಇತರರು ಅಭಿಪ್ರಾಯ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here