ಶ್ರೀ ಬ್ರಹ್ಮ ಮೊಗೇರ ಮಹಾಂಕಳಿ ದೈವಸ್ಥಾನ ತೋಡಾರ್ ಕಾಪಿಕಾಡ್ ಇಲ್ಲಿ ನಡೆದ ಬ್ರಹ್ಮ ಕಳಶ ಸಭಾ ವೇದಿಕೆಯಲ್ಲಿ ಶ್ರೀ ಕ್ಷೇತ್ರ ದ ಸಮಿತಿಯ ಮುಂದಾಳತ್ವದಲ್ಲಿ ನೂತನ ಭಜನಾ ಮಂಡಳಿ ಲೋಕಾರ್ಪಣೆಗೊಂಡಿದೆ. 22ಸದಸ್ಯ ಬಲ ಇರುವ ಭಜನಾ ಮಂಡಳಿ ಗೆ ಪ್ರವೀಣ್. ಆರ್. ಕೋಟ್ಯಾನ್ ಮಾರ್ನಾಡ್ ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದಾರೆ.
ಶ್ರೀ ಶ್ರೀ ಶ್ರೀ ಮುಕ್ತನಂದ ಸ್ವಾಮೀಜಿ ಭಜನಾ ಮಂಡಳಿಯನ್ನು ಲೋಕಾರ್ಪಣೆಗೊಳಿಸಿ ತಾಳ ನೀಡುವ ಮೂಲಕ ಆಶೀರ್ವದಿಸಿದರು. ಅಧ್ಯಕ್ಷತೆ ಯನ್ನು ವಹಿಸಿದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶಾಂತಿ ಪ್ರಸಾದ್ ಹೆಗ್ಡೆ ಮಾತನಾಡಿ ಭಜನೆ ಎಂಬುದು ಹಿಂದೂ ಸಮಾಜದ ಅವಿಭಾಜ್ಯ ಅಂಗ ಮತ್ತು ಸಂಸ್ಕಾರದ ಸಂಸ್ಕೃತಿ. ಗ್ರಾಮದ ತೋಡಾರ್ ಪರಿಸರದಲ್ಲಿ ಕುಣಿತ ಭಜನಾ ತಂಡವು ಇಲ್ಲಿನ ಇತಿಹಾಸದಲ್ಲಿಯೇ ಪ್ರಪ್ರಥಮ ಭಾರಿಗೆ ಸಂಯೋಜನೆಗೊಂಡು ಲೋಕಾರ್ಪಣೆಗೊಂಡಿದೆ.
ಇದರ ಯಶಸ್ಸಿನ ಸಂಪೂರ್ಣ ಗೌರವ ತಂಡವನ್ನು ರಚಿಸಿದ ಶ್ರೀ ಕ್ಷೇತ್ರ ಸಮಿತಿಗೆ ಮತ್ತು ತರಬೇತಿ ನೀಡಿ ಮಕ್ಕಳನ್ನು ಭಜನಾ ಸೇವೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿರುವ ನನ್ನ ಅತ್ಹ್ಮಿಯ ಮಾರ್ನಾಡಿನ ಪ್ರವೀಣ್. ಆರ್. ಕೋಟ್ಯಾನ್ ಇವರಿಗೆ ಸಲ್ಲಬೇಕು. ಎಂದು ನುಡಿದರು.
ಸಭೆಯಲ್ಲಿ ಭಜನಾ ಮಂಡಳಿಗೆ ಮಕ್ಕಳ ವಸ್ತ್ರ, ಶಲ್ಯ, ತಾಳ 25000/- ವಚ್ಚ ವನ್ನು ನೀಡಿರುವ ಉದ್ಯಮಿ ಅರುಣ್ ರೈ ತೋಡಾರ್, ಗುತ್ತು ಬರ್ಕೆ ಮನೆತನದ ಹಿರಿಯ ಶ್ರೀ ಕ್ಷೇತ್ರ ಗುರಿಕಾರರು, ಕ್ಷೇತ್ರ ಸಮಿತಿ ಮತ್ತು ಮಹಿಳಾ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

