ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರದ ವಾರ್ಷಿಕ ಮಹಾಸಭೆ ಅಕ್ಟೋಬರ್ 25 ರಂದು ಸಮಾಜ ಮಂದಿರದಲ್ಲಿ ನಡೆಯಿತು. ಕೇಂದ್ರದ ಅಧ್ಯಕ್ಷ ಅಭಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಾಮನ್ ನಾಯಕ್ ಅವರು ಕಸಿ ಕಟ್ಟುವ ವಿಧಾನದ ಬಗ್ಗೆ ಸಮಗ್ರ ಮಾಹಿತಿಯನ್ನು ಸಭೆಗೆ ನೀಡಿದರು. ರಾಜವರ್ಮ ಬೈಲಾಂಗಡಿ ಕಲ್ಪರಸದ ಬಗ್ಗೆ ವಿವರಿಸಿದರು.

ಸದಾನಂದ ನಾರಾವಿ ಸ್ವಾಗತಿಸಿದರು. ದೀಪಕ್ ಕೂಳಕ್ಕೆ ವರದಿ ವಾಚಿಸಿದರು. ಲಿಡ್ವಿನ್ ಡಿಕೋಸ್ಟ ಲೆಕ್ಕಪತ್ರ ಮಂಡಿಸಿದರು. ಹರೀಶ್ ಕೋಟ್ಯಾನ್ ವಂದಿಸಿದರು.

