ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಮೂಡುಬಿದಿರೆ ತಾಲೂಕಿನ ಧಾರಿಣಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸುಬ್ರಮಣ್ಯ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ದ. ಕ. ಹಾಲು ಒಕ್ಕೂಟದ ನಿರ್ದೇಶಕರಾದ ಸುಚರಿತ ಶೆಟ್ಟಿ ಇವರು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಜ್ಞಾನ ವಿಕಾಸ ಕಾರ್ಯಕ್ರಮದಿಂದ ಮಹಿಳೆಯರಲ್ಲಿ ಆದ ವಿಶೇಷ ಬದಲಾವಣೆ ಯ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅನಿತಾ ಶೆಟ್ಟಿ ಶಿಕ್ಷಕಿ ಹಾಗೂ ಸಾಹಿತಿಗಳು ಇವರು ಮಾತನಾಡಿ ಮಹಿಳಾ ಸಬಲೀಕರಣದ ಬಗ್ಗೆ, ಸಮಾಜದಲ್ಲಿ ಮಹಿಳೆಯರ ಸ್ಥಾನ ಎಷ್ಟು ಶ್ರೇಷ್ಠ ವಾದುದು ಎಂಬ ಬಗ್ಗೆ ಹಲವಾರು ಉದಾಹರಣೆಗಳ ಮೂಲಕ ತಿಳಿಸಿ, ಯೋಜನೆ ಯ ಕಾರ್ಯಕ್ರಮದ ಬಗ್ಗೆ ಉತ್ತಮ ಅಭಿಪ್ರಾಯವನ್ನು ತಿಳಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಯೋಜನಾಧಿಕಾರಿ ಯವರಾದ ಧನಂಜಯ ಸರ್, ಪ್ರೌಢ ಶಾಲೆಯ ಶಿಕ್ಷಕರಾದ ದಿನಕರ್ ಕುಂಭಷಿಯವರು, ಒಕ್ಕೂಟದ ಅಧ್ಯಕ್ಷೆ ರೇವತಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಪಿಗೆ ವಲಯದ ಅಧ್ಯಕ್ಷರಾದ ಸುಕೇಶ್ ಪೂಜಾರಿಯವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳನ್ನು ಗುರುತಿಸುವ ಕಾರ್ಯಕ್ರಮ ಹಾಗೂ ಸುಜ್ಞಾನ ನಿಧಿ ಶಿಷ್ಯ ವೇತನದ ಮಂಜೂರಾತಿ ಪತ್ರ ವನ್ನು 11 ವಿದ್ಯಾರ್ಥಿ ಗಳಿಗೆ ವಿತರಣೆ ಮಾಡಲಾಯ್ತು. ಕೇಂದ್ರದ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು ಇದರ ಬಹುಮಾನವನ್ನು ವಿತರಣೆ ಮಾಡಲಾಯ್ತು. ರಾಜೇಶ್ವರಿ ಯವರು ಅನಿಸಿಕೆ ವ್ಯಕ್ತ ಪಡಿಸಿದರು. ಸಂಯೋಜಕಿ ಜ್ಯೋತಿ ಯವರು ವರದಿ ವಾಚಿಸಿದರು. ಜ್ಞಾನ ವಿಕಾಸ ಸಮನ್ವಯಧಿಕಾರಿ ವಿದ್ಯಾ ರವರು ಕಾರ್ಯಕ್ರಮ ನಿರೂಪಿಸಿ, ಆಶಾ ರವರು ಸ್ವಾಗತಿ ಸಿ, ಸೇವಾಪ್ರತಿನಿಧಿ ವಸಂತಿಯವರು ಧನ್ಯವಾದವಿತ್ತರು

