ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ *ಸಾಮೂಹಿಕ ಸತ್ಯನಾರಾಯಣ ಪೂಜೆ
ಮೂಡುಬಿದಿರೆ: ಇಲ್ಲಿನ ಸಪಳಿಗ ಯಾನೆ ಗಾಣಿಗರ ಸೇವಾ ಸಂಘ ಮೂಡುಬಿದಿರೆ ಹಾಗೂ ಗಾಣಿಗರ ಮಹಿಳಾ ವೇದಿಕೆ ಮತ್ತು ಯುವ ವೇದಿಕೆ ವಾರ್ಷಿಕ ಮಹಾಸಭೆ, ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಪೊನ್ನೆಚ್ಚಾರಿಯ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆಯಿತು.
ಬಂಟ್ವಾಳ ವರ್ತಕರ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎಂ.ಸುಭಾಶ್ಚAದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು. ಯಾವುದೇ ಸಂಘಟನೆಯನ್ನು ಬೆಳೆಸಬೇಕಾದರೆ ಅದಕ್ಕೆ ಒಬ್ಬ ನಾಯಕ ಬೇಕು. ನಾಯಕನಿಲ್ಲದೇ ಸಂಘಟನೆ ಉತ್ತಮವಾಗಿ ಬೆಳೆಯಲು ಸಾಧ್ಯವಿಲ್ಲ. ಅಥವಾ ಒಂದು ಸಂಘ ಮಾಡಿದ ಕೇವಲ ಭಾಷಣ ಮಾಡಿದರೆ ಸಂಘಟನೆಯನ್ನು ಮುಂದುವರಿಸಲು ಸಾಧ್ಯವಿಲ್ಲ. ವಿವಿಧ ರೀತಿಯ ಕನಸುಗಳನ್ನು ಕಂಡು ಆ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಸಂಘಟನೆಗಳನ್ನು ಮುಂದುವರಿಸಿಕೊAಡು ಹೋದಲ್ಲಿ ಸಂಘಟನೆಗಳು ಇನ್ನಷ್ಟು ಬಲಿಷ್ಠವಾಗುತ್ತದೆ ಎಂದರು.
ಸAಘದ ಅಧ್ಯಕ್ಷ ರಾಜೇಶ್ ಬಂಗೇರ ಅಧ್ಯಕ್ಷತೆ ವಹಿಸಿದರು.
ಸಮಾಜದ ಹಿರಿಯರಾದ ಶೇಖರ ಸಪಳಿಗ ಹಾಗೂ ವನಜಾ ಬೆಟ್ಕೇರಿ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧನೆಗೈದ ರಾಜ್ ಬಂಗೇರ ಮತ್ತು ಈಜುಗಾರಿಕೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶಾನ್ ಸಪಳಿಗರನ್ನು ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
ಮಂಗಳೂರು ಉತ್ತರ ಮಂಡಲದ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ ಪ್ರಮೋದ್ ಕರ್ಕೇರ, ಗೌರವಾಧ್ಯಕ್ಷ ಡಾ. ಸತ್ಯಶಂಕರ್ ಪುತ್ರನ್, ಯುವ ವೇದಿಕೆಯ ಅಧ್ಯಕ್ಷ ಶತ್ರುಘ್ನ, ಮಹಿಳಾ ವೇದಿಕೆಯ ಅಧ್ಯಕ್ಷೆ ಸುಜಯ ಬಂಗೇರ, ವಿದ್ಯಾರ್ಥಿ ವೇದಿಕೆಯ ಅಧ್ಯಕ್ಷ ಪ್ರಥಮ್ ಉಪಸ್ಥಿತರಿದ್ದರು.
ವಾರ್ಷಿಕ ವರದಿಯನ್ನು ಸಾರಿಕಾ ಬಂಗೇರ ಹಾಗೂ ಲೆಕ್ಕಪತ್ರವನ್ನು ಸಂಘದ ಉಪಾಧ್ಯಕ್ಷ ಜಗನ್ನಾಥ ಸಪಳಿಗ ಮಂಡಿಸಿದರು. ಜತೆ ಕಾರ್ಯದರ್ಶಿ ಕೇಶವ ಪೊಳಲಿ ಹಾಗೂ ಸಾಧಕ ವಿದ್ಯಾರ್ಥಿಗಳ ಸನ್ಮಾನ ಪತ್ರವನ್ನು ರೂಪಾ ಪ್ರದೀಪ್, ಲಕ್ಷೀತಾ ಶತ್ರುಘ್ನ , ವಾರ್ಷಿಕ ಕ್ರೀಡಾಕೂಟದ ವಿಜೇತರ ಪಟ್ಟಿಯನ್ನು ಸ್ವಸ್ತಿ , ಪ್ರಮೀಳಾ ಗುರುಬೆಟ್ಟು, ದಿಯಾ ಬಂಗೇರ ಸನ್ಮಾನಿತರ ಹಾಗೂ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.
ಸಂಧ್ಯಾ ಸಂದೀಪ್ ಹಾಗೂ ಮಾಲತಿ ನವೀನ್ ನಿರೂಪಿಸಿದರು. ಪ್ರತಾಪ್ ಬೆಟ್ಕೇರಿ ವಂದಿಸಿದರು.
ಸಭಾ ಕಾರ್ಯಕ್ರಮದ ಮೊದಲು ಸಾಮೂಹಿಕ ಸತ್ಯನಾರಾಯಣ ಪೂಜೆ, ಭಜನಾ ಕಾರ್ಯಕ್ರಮ ನಡೆಯಿತು.