ಮೂಡುಬಿದಿರೆ : ರಾಷ್ಟ್ರೀಯ ಹೆದ್ದಾರಿ ವಿದ್ಯಾಗಿರಿ-ಮೂಡುಬಿದಿರೆ ಗಾಂಧಿನಗರದಲ್ಲಿ ಆಟೋ ರಿಕ್ಷಾವೊಂದು ಪಾದಚಾರಿಯೊಬ್ಬರಿಗೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಗಾಯಗೊಂಡ ವ್ಯಕ್ತಿ ಗಾಂಧಿನಗರದ ಕರ್ದಬೆಟ್ಟು ನಿವಾಸಿ ಶಂಕರ್ ಆಚಾರ್ಯ ಎಂದು ತಿಳಿದು ಬಂದಿದೆ.
ಅವರು ಶುಕ್ರವಾರ ರಾತ್ರಿ ಮೂಡುಬಿದಿರೆ ಕಡೆಯಿಂದ ಗಾಂಧಿನಗರದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಶೇಖರ್ ಎಂಬವರು ಚಲಾಯಿಸುತ್ತಿದ್ದ ಆಟೋ ರಿಕ್ಷಾ ಇವರಿಗೆ ಹಿಂದಿನಿಂದ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.
ಅಪಘಾತದ ಭೀಕರತೆಗೆ ಶಂಕರ್ ಆಚಾರ್ಯ ಅವರ ತಲೆಗೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ಸ್ಥಳೀಯರ ನೆರವಿನಿಂದ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

