ಮೂಡುಬಿದಿರೆ: ಅ.18ರಂದು ಬೆದ್ರ ಗೂಡುದೀಪ ಮತ್ತು ರಂಗೋಲಿ ಸ್ಪರ್ಧೆ

0
29


ಮೂಡುಬಿದಿರೆ: ಸಮಾಜ ಮಂದಿರ ಸಭಾ(ರಿ.) ಮೂಡುಬಿದಿರೆ ಮತ್ತು ಯುವವಾಹಿನಿ ಮೂಡುಬಿದರೆ ಘಟಕದ ಜಂಟಿ ಆಶ್ರಯದಲ್ಲಿ 4ನೇ ವರ್ಷದ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ ಬೆದ್ರ ಗೂಡುದೀಪ ಮತ್ತು ರಂಗೋಲಿ ಸ್ಪರ್ಧೆ-2025 ಸಮಾಜ ಮಂದಿರದಲ್ಲಿ ಅ. 18 ರಂದು ಶನಿವಾರ ಸಂಜೆ 4 ಗಂಟೆಯಿಂದ ನಡೆಯಲಿದೆ.
ಸಮಾರೋಭ ಸಮಾರಂಭ 7 ಗಂಟೆಯಿಂದ ನಡೆಯಲಿದ್ದು, ಕೆ. ಅಭಯಚಂದ್ರ ಜೈನ್‌ ಮಾಜಿ ಸಚಿವರು ಕರ್ನಾಟಕ ಸರಕಾರ ಕಾರ್ಯಕ್ರಮ ಉದ್ಘಾಟಿಸಲಿರುವರು. ಮುರಳೀಧರ ಕೋಟ್ಯಾನ್‌ ಅಧ್ಯಕ್ಷರು ಯುವವಾಹಿನಿ ಘಟಕ ಅಧ್ಯಕ್ಷತೆ ವಹಿಸಲಿರುವರು. ಅಜಿತ್‌ ಕುಮಾರ್‌ ಪಾಲೇರಿ ದೀಪಾವಳಿಯ ಸಂದೇಶ ತಿಳಿಸಲಿರುವರು. ಮುಖ್ಯ ಅತಿಥಿಗಳಾಗಿ ಲೋಕೇಶ್‌ ಕೋಟ್ಯಾನ್‌, ಮಿಥುನ್‌ ರೈ, ವಿವೇಕ್‌ ಆಳ್ವ, ಅಶ್ವಿನ್‌ ಜೆ ಪೀರೇರಾ, ಅಬುಲಾಲ್‌ ಪುತ್ತಿಗೆ, ಕುಮಾರ್‌ ಪೂಜಾರಿ, ಜಾವೇದ್‌ ಶೇಖ್‌ ಉಪಸ್ಥಿತರಿರಲಿರುವರು.

ಸ್ಪರ್ಧೆಯ ವಿಭಾಗಗಳು
*ಆಧುನಿಕ ಗೂಡುದೀಪ
*ಮಾದರಿ ಗೂಡುದೀಪ
*ಸಾಂಪ್ರದಾಯಿಕ ಗೂಡುದೀಪ
*ರಂಗೋಲಿ ಸ್ಪರ್ಧೆ

ಗೂಡುದೀಪ ಸ್ಪರ್ಧೆ ನಿಯಮಗಳು
1 ಸಾಂಪ್ರದಾಯಿಕ ಗೂಡುದೀಪ-ಸೀಮೆಕೋಲಿನ ಅಷ್ಟಪಟ್ಟಿ ಗೂಡುದೀಪಕ್ಕೆ ಕಿವಿ, ರೆಕ್ಕೆ, ಬಾಲ ಇರುವ ಹಾಗೆ, ಕಲರ್ ಪೇಪರ್ ಮಾತ್ರ ಬಳಕೆ, ಒಳಗೆ ಕಡ್ಡಾಯವಾಗಿ ಬಲ್ಬು ಅಳವಡಿಸಿ ಹೊರಗೆ ಬೆಳಕು ಚೆಲ್ಲಬೇಕು ಮತ್ತು ತೂಗು ಹಾಕಬೇಕು.

  1. ಆಧುನಿಕ ಗೂಡುದೀಪ – ಯಾವುದೇ ವಸ್ತು ಉಪಯೋಗಿಸಬಹುದು, ಅಷ್ಟಪಟ್ಟಿ ಗೂಡುದೀಪ ಇರಬೇಕು. ತೂಗು ಹಾಕಬೇಕು.
  2. ಪ್ರತಿಕೃತಿ ಗೂಡುದೀಪ – ಯಾವುದೇ ವಸ್ತು ಉಪಯೋಗಿಸಬಹುದು. ಗೂಡುದೀಪಕ್ಕೆ ಬಲ್ಫ್, ವಯರ್ ಸ್ಪರ್ಧಿಗಳೇ ತರತಕ್ಕದ್ದು.
  3. ಅತೀ ಕಡಿಮೆ ಖರ್ಚಿನ ಕ್ರಿಯಾತ್ಮಕ ಗೂಡುದೀಪಕ್ಕೆ ಪ್ರಾಶಸ್ತ್ರ.
  4. ನಮ್ಮ ವತಿಯಿಂದ ಈ ಹಿಂದೆ ನಡೆದ ಸ್ಪರ್ಧೆಗಳಲ್ಲಿ ಪ್ರಥಮ/ದ್ವಿತೀಯ ಸ್ಥಾನವನ್ನು ಪಡೆದ ಅದೇ ಮಾದರಿಯ ಗೂಡುದೀಪ, ಈ ಬಾರಿ ಮರು ಸ್ಪರ್ಧೆಗೆ ಬಂದರೆ, ಆ ಗೂಡುದೀಪವನ್ನು ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ.

ರಂಗೋಲಿ ಸ್ಪರ್ಧೆ ನಿಯಮಗಳು

  1. ರಂಗೋಲಿಯನ್ನು ಚುಕ್ಕಿ ಹಾಕಿ ಮಾತ್ರ ಬಿಡಿಸುವುದು.
  2. ಬಣ್ಣದ ರಂಗೋಲಿ ಹುಡಿಯನ್ನು ಬಳಸಲು ಮಾತ್ರ.
  3. ಬಣ್ಣದ ಕಾಗದ, ಹೂವನ್ನು ಉಪಯೋಗಿಸಲು ಅವಕಾಶ ಇಲ್ಲ
  4. ವಿನ್ಯಾಸದ ಸಲಕರಣೆಗಳನ್ನು ಬಳಸದೇ ಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸುವುದು ಮತ್ತು ವಿನ್ಯಾಸವನ್ನು ಸ್ಪರ್ಧಿಯೇ ಆಯ್ಕೆ ಮಾಡುವುದು, ವಸ್ತುಗಳನ್ನು ಸ್ಪರ್ಧಾಳುಗಳೇ ತರಬೇಕು.
  5. (ಅಳತೆ 2+2 ಅಡಿ) ಬಣ್ಣ, ವಿನ್ಯಾಸ ಅಚ್ಚುಕಟ್ಟುತನ ಸೃಜನಶೀಲತೆ ಮತ್ತು ಒಟ್ಟು ಪರಿಣಾಮ ಪ್ರಾಶಸ್ತ್ರ ನೀಡಲಾಗುವುದು.

ಬಹುಮಾನಗಳ ವಿವರ
ಗೂಡುದೀಪ ಸ್ಪರ್ಧೆ
ಪ್ರಥಮ : 5000/-
ದ್ವೀತಿಯ : 3000/-
ತೃತೀಯ : 2000/-

ರಂಗೋಲಿ ಸ್ಪರ್ಧೆ
ಪ್ರಥಮ : 2000/-
ದ್ವೀತಿಯ : 1500/-
ತೃತೀಯ : 1000/-

ವಿಶೇಷ ಸೂಚನೆ :
*ಸ್ಪರ್ಧೆಯು ಸಂಜೆ 4 ಗಂಟೆಗೆ ಪ್ರಾರಂಭವಾಗುವುದು
*ಸ್ಪರ್ಧೆಯಲ್ಲಿ ಭಾಗವಹಿಸಲು 16-10-2025 ಗುರುವಾರ ಸಂಜೆ 5 ಗಂಟೆಯ ಮೊದಲು ಸ್ಪರ್ಧಿಗಳು ತಮ್ಮ ಹೆಸರನ್ನು ನೊಂದಾಯಿಸತಕ್ಕದ್ದು.
*ಸಂಘಟಕರ ತೀರ್ಮಾನವೇ ಅಂತಿಮ

LEAVE A REPLY

Please enter your comment!
Please enter your name here