“ರಕ್ತದಾನ ಶಿಬಿರ ಒಂದುಅದ್ಭುತವಾದಕಾರ್ಯಕ್ರಮ, ರಕ್ತದಾನವು ಜೀವಗಳನ್ನು ಉಳಿಸಲು ನೀಡಬಹುದಾದಅತ್ಯುತ್ತಮಉಡುಗೊರೆ. ರಕ್ತದಾನವುಅಗತ್ಯವಿರುವವರಿಗೆಜೀವನ ನೀಡುತ್ತದೆ. ಇದು ಬಹಳ ಮಹತ್ವದ ಕೆಲಸವಾಗಿದೆ.ರಕ್ತದಾನದಿಂದದೇಹದ ಲೋಹದ ಪ್ರಮಾಣ ನಿಯಂತ್ರಿತವಾಗುತ್ತದೆ ಹಾಗೂ ಹೃದಯದಆರೋಗ್ಯಕ್ಕೂ ಸಹಕಾರಿಯಾಗುತ್ತದೆ. ಕೇವಲ ಒಂದುಯೂನಿಟ್‌ರಕ್ತವು ಹಲವಾರು ಜೀವಗಳನ್ನು ಉಳಿಸಬಹುದು.ಈ ಶಿಬಿರವು ಯಶಸ್ವಿಯಾಗಿ ನೆರವೇರಲಿ” ಎಂಬುದಾಗಿ ಮಂಗಳೂರಿನ ಲೇಡಿಗೋಶೆನ್‌ಆಸ್ಪತ್ರೆಯವೈದ್ಯಾಧಿಕಾರಿಡಾ.ವರುಣ್ ಬನ್ಸಾಲ್ ತಿಳಿಸಿದರು.ಅವರು ಶ್ರೀ ಮಹಾವೀರಕಾಲೇಜಿನಲ್ಲಿ ಐಕ್ಯೂಎಸಿ, ಎನ್.ಎಸ್.ಎಸ್, ಎನ್.ಸಿ.ಸಿ, ಯುವರೆಡ್‌ಕ್ರಾಸ್, ರೋವರ್ಸ್, ರೇಂಜರ್ಸ್ ಘಟಕಗಳು ಲಯನ್ಸ್ಕ್ಲಬ್ ನಿಡ್ಡೋಡಿಕಲ್ಲಮುಂಡ್ಕೂರು, ಇನ್ನವ್ಹೀðಲ್‌ಕ್ಲಬ್ ಮೂಡಬಿದಿರೆ, ರೋಟರಿಕ್ಲಬ್ ಮೂಡಬಿದಿರೆಟೆಂಪಲ್‌ಟೌನ್ ಮತ್ತು ಭಾರತೀಯರೆಡ್‌ಕ್ರಾಸ್ ಸಂಸ್ಥೆ ಮೂಡಬಿದಿರೆಇವರೆಲ್ಲರ ಸಹಯೋಗದಲ್ಲಿ ಆಯೋಜಿಸಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಲಯನ್ಸ್ಕ್ಲಬ್ ನಿಡ್ಡೋಡಿಕಲ್ಲಮುಂಡ್ಕೂರುಅಧ್ಯಕ್ಷ ಲಯನ್ ಸಂದೀಪ್ ಸುವರ್ಣ, ಇನ್ನವ್ಹೀðಲ್‌ಕ್ಲಬ್ ಮೂಡಬಿದಿರೆಅಧ್ಯಕ್ಷೆ ಶ್ವೇತಾಜೈನ್, ರೋಟರಿಕ್ಲಬ್ ಮೂಡಬಿದಿರೆಟೆಂಪಲ್‌ಟೌನ್‌ಅಧ್ಯಕ್ಷ ಹರೀಶ್ ಎಂ.ಕೆ, ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲೆ ಲೆಫಿû್ಟನೆಂಟ್ ವಿಜಯಲಕ್ಷಿ÷್ಮ, ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್, ಯುವರೆಡ್‌ಕ್ರಾಸ್‌ಅಧಿಕಾರಿ ಶ್ರೀಗೌರಿ, ಎನ್‌ಎಸ್‌ಎಸ್‌ಅಧಿಕಾರಿ ಶಾರದಾ, ರೇಂಜರ್ಸ್ಅಧಿಕಾರಿಅರುಣಾ ಮತ್ತುರೋವರ್ಸ್ಅಧಿಕಾರಿ ಸಂದೀಪ್ ಹಾಗೂ ವಿದ್ಯಾರ್ಥಿ ನಾಯಕಿ ಸಾಕ್ಷಿ ಶೆಟ್ಟಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ನಿಶ್ಚಿತಾ ಸ್ವಾಗತಿಸಿ, ಮೆರಿಟಾ ವಂದಿಸಿದರು ಹಾಗೂ ರಕ್ಷಿತಾ ನಿರೂಪಿಸಿದರು.