ಮೂಡುಬಿದಿರೆ: ಬಂಟರ ಸಂಘ ಮೂಡುಬಿದಿರೆ ಮತ್ತು ಬಂಟರ ಮಹಿಳಾ ಘಟಕ ಮೂಡುಬಿದಿರೆ ವತಿಯಿಂದ ಪ್ರತಿಭಾ ಪುರಸ್ಕಾರ, ಸನ್ಮಾನ, ಸಹಾಯಧನ ವಿತರಣೆ, ಅಡುಗೆ ಸ್ಪರ್ಧೆ, ಛದ್ಮವೇಷ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ೩ ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವು ಆಗಸ್ಟ್ ೩ ರಂದು ಬೆಳಿಗ್ಗೆ ೯ ರಿಂದ ಕೃಷಿಸಿರಿ ವೇದಿಕೆ ಆಳ್ವಾಸ್ ಕ್ಯಾಂಪಸ್ ವಿದ್ಯಾಗಿರಿ ಮೂಡುಬಿದಿರೆಯಲ್ಲಿ ಜರುಗಲಿದೆ ಎಂದು ಬಂಟರ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.